ರಾಧೆ ಶ್ಯಾಮ್‌ ಚಿತ್ರಕ್ಕೆ ದ ಕಾಶ್ಮೀರಿ ಫೈಲ್ಸ್‌ ಪೈಪೋಟಿ: ಎರಡೂ ಚಿತ್ರದ ಕಲೆಕ್ಷನ್‌ ಹೇಗಿದೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಶುಕ್ರವಾರವಷ್ಟೆ ರಿಲೀಸ್‌ ಆಗಿ ಭರ್ಜರಿ ತೆರೆ ಕಾಣುತ್ತಿರುವ ದ ಕಶ್ಮೀರಿ ಪ್ಲಥಸ್‌ ಈಗ ಪ್ರಭಾಸ್‌ ನಟನೆಯ ರಾಧೆ ಶ್ಯಾಮ್‌ ಚಿತ್ರಕ್ಕೆ ಪೈಪೋಟಿ ನೀಡುವಂತಿದೆ.
ಮಾ.11ಕ್ಕೆ ರಿಲೀಸ್‌ ಆದ ದ ಕಾಶ್ಮೀರಿ ಫೈಲ್ಸ್‌ ಚಿತ್ರ ಮೊದಲ ದಿನ ಬರೋಬ್ಬರಿ 3.55 ಕೋಟಿ ರೂ. ಬಾಚಿಕೊಂಡಿದ್ದು, ಎರಡೇ ದಿನಕ್ಕೆ 7 ಕೊಟಿ ರೂ. ಕಲೆಕ್ಷನ್‌ ಮಾಡಿದೆ.
1990ರ ಕಾಶ್ಮೀರ ಘಟನೆಗಳು, ಕಾಶ್ಮೀರಿ ಪಂಡಿತರ ಮೇಲೆ ನಡೆದ ಹಿಂಸಾಚಾರವನ್ನು ಈ ಚಿತ್ರ ಜನರೆದುರು ಚಿತ್ರದ ಮೂಲಕ ತೋರಿಸಿದೆ.
ಖೇರ್, ದರ್ಶನ್ ಕುಮಾರ್, ಮಿಥುನ್ ಚಕ್ರವರ್ತಿ, ಪಲ್ಲವಿ ಜೋಶಿ, ಪ್ರಕಾಶ್ ಬೆಳವಾಡಿ ಮೊದಲಾದವರು ಬಣ್ಣಹಚ್ಚಿರುವ ಈ ಚಿತ್ರ ಬಾಕ್ಸ್‌ ಆಫೀಸ್​ನಲ್ಲೂ ಸದ್ದು ಮಾಡುತ್ತಿದೆ. ಕಾಶ್ಮೀರ್ ಫೈಲ್ಸ್ ಸುಮಾರು 630ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಂಡಿದೆ.
ಪ್ಯಾನ್‌ ಇಂಡಿಯಾ ಚಿತ್ರ ರಾಧೆ ಶ್ಯಾಮ್ ಮೊದಲ ದಿನ ಒಟ್ಟಾರೆ 4.50 ಕೋಟಿ ರೂ. ಬಾಚಿಕೊಂಡಿದೆ. ಇನ್ನು ಮುಂದಿನ ದಿನಗಳಲ್ಲಿ ಈ ಎರಡೂ ಚಿತ್ರ ಯಾವ ರೀತಿ ಕಲೆಕ್ಷನ್‌ ಮಾಡುತ್ತೆ ಎಂದು ಕಾದುನೋಡಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!