ನಟ ದರ್ಶನ್ ಕೇಸ್ ಕುರಿತು ಮೌನ ಮುರಿದ ರಾಧಿಕಾ ಕುಮಾರಸ್ವಾಮಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ದರ್ಶನ್​ ಕುರಿತು ಮೊದಲ ಬಾರಿಗೆ ರಾಧಿಕಾ ಕುಮಾರಸ್ವಾಮಿ ಮಾತನಾಡಿದ್ದಾರೆ.

ದರ್ಶನ್​ ಜೊತೆ ‘ಮಂಡ್ಯ’, ‘ಅನಾಥರು’ ಸಿನಿಮಾಗಳಲ್ಲಿ ನಟಿಸಿದ್ದ ರಾಧಿಕಾ ಮೊದಲ ಬಾರಿಗೆ ಈ ಕೇಸ್​ ಬಗ್ಗೆ ಮಾತನಾಡಿದ್ದು, ತಾವು ನೋಡಿದ ದರ್ಶನ್​ ಅವರ ವ್ಯಕ್ತಿತ್ವ ಎಂಥದ್ದು ಎಂಬುದನ್ನು ನೆನಪಿಸಿಕೊಂಡಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ದರ್ಶನ್​ ಅವರ ಅವಶ್ಯಕತೆ ತುಂಬ ಇದೆ ಎಂದು ಅವರು ಹೇಳಿದ್ದಾರೆ.

ದರ್ಶನ್​ ವಿಷಯ ಮಾತನಾಡುವಾಗ ಮನಸ್ಸಿಗೆ ತುಂಬ ನೋವಾಗುತ್ತದೆ. ನಾನು ‘ಮಂಡ್ಯ’ ಮತ್ತು ‘ಅನಾಥರು’ ಸಿನಿಮಾಗಳ ಶೂಟಿಂಗ್​ ಸಮಯದಲ್ಲಿ ಅವರನ್ನು ನೋಡಿದ್ದು. ಸೆಟ್​ನಲ್ಲಿ ಎಲ್ಲರ ಬಳಿಯೂ ಅಣ್ಣ.. ಬನ್ನಿ.. ಹೋಗಿ ಎಂದು ಗೌರವ ಕೊಟ್ಟು ಮಾತನಾಡುತ್ತಿದ್ದರು. ಅಷ್ಟು ದೊಡ್ಡ ನಟ ಎಂಬುದನ್ನು ಅವರು ಎಲ್ಲಿಯೂ ತೋರಿಸಿಕೊಳ್ಳುತ್ತಾ ಇರಲಿಲ್ಲ’ ಎಂದಿದ್ದಾರೆ .

ಸಡನ್​ ಆಗಿ ಈ ಒಂದು ವಿಚಾರ ಕೇಳಿಸಿಕೊಂಡಾಗ ನನಗೆ ನಂಬೋಕೆ ಸಾಧ್ಯವಾಗಲಿಲ್ಲ. ಇದು ನಿಜಾನಾ ಎಂಬ ಪ್ರಶ್ನೆ ಮೂಡಿತು. ಅವರವರ ಜೀವನದಲ್ಲಿ ಏನು ಆಗಿರತ್ತೋ ಅದು ಅವರಿಗೆ ಮಾತ್ರ ಗೊತ್ತಿರಲು ಸಾಧ್ಯ. ಯಾರೋ ಹೇಳಿದ್ದು, ನ್ಯೂಸ್​ನಲ್ಲಿ ನೋಡಿದ್ದು ಮಾತ್ರ ನಮಗೆ ಗೊತ್ತಿರಲು ಸಾಧ್ಯ. ಅವರ ಲೈಫ್​ನಲ್ಲಿ ಏನಾಗಿರುತ್ತದೆ ಎಂಬುದು ನಮಗೆ ಗೊತ್ತಿರುವುದಿಲ್ಲ. ಯಾರ ಬಗ್ಗೆಯೂ ನಾವು ಕಮೆಂಟ್​ ಮಾಡುವುದು ತಪ್ಪು ಎಂದು ರಾಧಿಕಾ ಹೇಳಿದ್ದಾರೆ.

ಪ್ರಾಮಾಣಿಕವಾಗಿ ಒಂದು ಮಾತು ಹೇಳುತ್ತೇನೆ. ನಮ್ಮ ಚಿತ್ರರಂಗಕ್ಕೆ ದರ್ಶನ್​ ಅವರು ಬೇಕು. ಅವರಿಗೆ ಒಳ್ಳೆಯದಾಗಲಿ ಅಂತ ನಾನು ಹೇಳುತ್ತೇನೆ. ಜೀವನದಲ್ಲಿ ಕೆಲವು ಘಟನೆಗಳು ನಡೆದಾಗ ಮುಂಚಿತವಾಗಿ ಏನೂ ಗೊತ್ತಾಗುವುದಿಲ್ಲ. ಎಲ್ಲರ ಜೀವನದಲ್ಲಿ ಕೆಟ್ಟ ಘಟನೆಗಳು ನಡೆದಿವೆ. ಅದನ್ನೆಲ್ಲ ಎದುರಿಸಿ ನಾವು ಮುಂದೆ ಹೋಗಬೇಕು ಅಷ್ಟೇ. ದರ್ಶನ್​ ಅವರಿಗೂ ನಾನು ಅದನ್ನೇ ಹೇಳುವುದು. ಜೀವನದಲ್ಲಿ ಇರುವ ತೊಂದರೆಗಳನ್ನು ಆದಷ್ಟು ಬೇಗ ಪರಿಹರಿಸಿಕೊಂಡು ಆದಷ್ಟು ಬೇಗ ಅವರು ನಮ್ಮ ಚಿತ್ರರಂಗಕ್ಕೆ ಮರಳಿ ಬರಲಿ’ ಎಂದಿದ್ದಾರೆ ರಾಧಿಕಾ ಕುಮಾರಸ್ವಾಮಿ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!