ರೆಸಿಪಿ: ಮೂಲಂಗಿ ಪರೋಟ
ಸಮಯ_ ಮುಕ್ಕಾಲು ಗಂಟೆ
ಸಾಮಾಗ್ರಿಗಳು
ತುರಿದ ಮೂಲಂಗಿ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಈರುಳ್ಳಿ
ಹಸಿಮೆಣಸು
ಕೊತ್ತಂಬರಿ
ಮ್ಯಾಗಿ ಮ್ಯಾಜಿಕ್ ಮಸಾಲಾ
ಉಪ್ಪು
ಸಾಂಬಾರ್ ಪುಡಿ
ಖಾರದ ಪುಡಿ
ಓಂ ಕಾಳು
ಗೋಧಿ ಹಿಟ್ಟು
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಹಸಿಮೆಣಸು, ಈರುಳ್ಳಿ ಹಾಕಿ.
ನಂತರ ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ.
ನಂತರ ತುರಿದ ಮೂಲಂಗಿ ಹಾಕಿ.
ನಂತರ ಇದಕ್ಕೆ ಸ್ವಲ್ಪ ಖಾರದ ಪುಡಿ,ಸಾಂಬಾರ್ ಪುಡಿ ಹಾಗೂ ಮ್ಯಾಗಿ ಮಸಾಲಾ ಹಾಕಿ.
ಬೆಂದ ಮೇಲೆ ತಟ್ಟೆಗೆ ಹಾಕಿ ಹರಡಿ.
ಇತ್ತ ಚಪಾತಿ ಹಿಟ್ಟಿಗೆ ಓಂ ಕಾಳು ಹಾಕಿ ಕಲಸಿ.
ನಂತರ ಚಪಾತಿ ಒಳಗೆ ಮೂಲಂಗಿ ಪಲ್ಯ ಇಟ್ಟು ಲಟ್ಟಿಸಿ ಬೇಯಿಸಿ ತಿನ್ನಿ.