ಕೃಷ್ಣಾ ನದಿಯಲ್ಲಿ ತೆಪ್ಪ ಮುಗುಚಿ 6 ಜನರು ನೀರುಪಾಲು

ಹೊಸದಿಗಂತ ವರದಿ, ವಿಜಯಪುರ:

ಇಸ್ಪೀಟ್ ಆಡುತ್ತಿದ್ದವರು ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ, ತೆಪ್ಪ ಮುಗಿಚಿ ಕೃಷ್ಣಾ ನದಿಯಲ್ಲಿ ಓರ್ವ ಸಾವಿಗೀಡಾಗಿದ್ದು, 5 ಜ‌ನರು ನಾಪತ್ತೆಯಾಗಿದ್ದು, ಇಬ್ಬರು ಬದುಕುಳಿದ ಘಟನೆ ಜಿಲ್ಲೆಯ ಕೊಲ್ಹಾರದ ರಾಷ್ಟ್ರೀಯ ಹೆದ್ದಾರಿ ಕೃಷ್ಣಾ ನದಿ ಸೇತುವೆ ಬಳಿ ಮಂಗಳವಾರ ನಡೆದಿದೆ.

ಮೃತಪಟ್ಟವನನ್ನು ಪುಂಡಲೀಕ ಯಂಕಂಚಿ (35) ಎಂದು ಗುರುತಿಸಲಾಗಿದೆ.

ಇಲ್ಲಿನ ಕೃಷ್ಣಾ ನದಿ ಸೇತುವೆ ಬಳಿ 8 ಜನರು ಸೇರಿಕೊಂಡು ಇಸ್ಪೀಟ್ ಆಡುತ್ತಿರುವ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು, ಆಗ ಪೊಲೀಸರಿಂದ ತಪ್ಪಿಸಿಕೊಳ್ಳಲು 8 ಜನರು ಮೀನುಗಾರರ ತೆಪ್ಪವನ್ನು ತೆಗೆದುಕೊಂಡು ಕೃಷ್ಣಾ ನದಿಯಲ್ಲಿ ತೆರಳುತ್ತಿದ್ದಾಗ, ತೆಪ್ಪ ಮುಗಚಿದ್ದು, ಇಬ್ಬರು ಈಜಿ ದಡ ಸೇರಿದ್ದರೆ, ಓರ್ವ ಶವವಾಗಿ ಪತ್ತೆಯಾಗಿದ್ದು, 5 ಜನರು ನಾಪತ್ತೆಯಾಗಿದ್ದಾರೆ.

ಬಳಿಕ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಪರಿಶೀಲಿಸಿದ್ದು, ಕಾಣೆಯಾದವರ ಶೋಧ ಕಾರ್ಯಕ್ಕೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಮುಂದಾಗಿದೆ.

ಕೊಲ್ಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!