ಸಂಸತ್‌ನಲ್ಲಿ ಶರಾವತಿ ಜಲವಿದ್ಯುತ್‌ ಯೋಜನೆ ಬಗ್ಗೆ ಕನ್ನಡದಲ್ಲಿಯೇ ಮಾತನಾಡಿದ ರಾಘವೇಂದ್ರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಶರಾವತಿ ಜಲವಿದ್ಯುತ್‌ ಯೋಜನೆ ಸಂತ್ರಸ್ತರ ವಿಚಾರವನ್ನು ಸಂಸದ ಬಿ.ವೈ.ರಾಘವೇಂದ್ರ ಅವರು ಲೋಕಸಭೆಯಲ್ಲಿ ಕನ್ನಡದಲ್ಲೇ ಪ್ರಸ್ತಾಪಿಸಿ ಗಮನ ಸೆಳೆದರು.

ಅನೇಕ ವರ್ಷಗಳ ಒಂದು ಸಮಸ್ಯೆ. ಸ್ವಾತಂತ್ರ್ಯ ಬಂದು 77 ವರ್ಷ ಆಯ್ತು. ಸಂವಿಧಾನ ಬಂದು 75 ವರ್ಷ ಆಯ್ತು. ನಾನು ಇವತ್ತು ಶರಾವತಿ ಜಲವಿದ್ಯುತ್‌ ಯೋಜನೆ ಸಂತ್ರಸ್ತರ ವಿಚಾರವನ್ನು ಪ್ರಸ್ತಾಪಿಸುತ್ತಿದ್ದೇನೆ. ಇದಕ್ಕೂ ಹತ್ತಿರತ್ತಿರ 75 ವರ್ಷಗಳು ತುಂಬುತ್ತಿವೆ ಎಂದು ಗಮನಕ್ಕೆ ತಂದರು.

1958-64 ರ ನಡುವೆ ಶರಾವತಿ ಯೋಜನೆ ಆಗುತ್ತದೆ. 4 ರಿಂದ 5 ಸಾವಿರ ರೈತರ ಕುಟುಂಬಗಳ ಕೃಷಿ ಭೂಮಿ ಈ ಯೋಜನೆಯಿಂದ ಮುಳುಗಡೆಯಾಗುತ್ತದೆ. ಇದುವರೆಗೂ ಸಂತ್ರಸ್ತ ರೈತರಿಗೆ ಕೃಷಿ ಭೂಮಿ ಒದಗಿಸಿಕೊಡುವ ಕೆಲಸವನ್ನು ಹಿಂದಿನ ಸರ್ಕಾರಗಳು ಮಾಡಿಲ್ಲ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!