ಹೊಸದಿಗಂತ ಡಿಜಿಟಲ್ ಡೆಸ್ಕ್:
ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಸ್ವಾಮೀಜಿಯವರ ’ಅನ್ನಬ್ರಹ್ಮ ಚಾತುರ್ಮಾಸ್ಯ’ದ ಹಿನ್ನೆಲೆಯಲ್ಲಿ ಶನಿವಾರ ಶ್ರೀಕ್ಷೇತ್ರ ಹೊರನಾಡಿನ ಧರ್ಮದರ್ಶಿಗಳಾದ ಜಿ. ಭೀಮೇಶ್ವರ ಜೋಶಿ ದಂಪತಿ ಶ್ರೀಗುರುಭಿಕ್ಷಾ ಸೇವೆ ಸಮರ್ಪಿಸಿದರು.
ಇದೇ ಸಂದರ್ಭ ಅನ್ನಪೂರ್ಣೇಶ್ವರಿಯ ಪ್ರಸಾದ ರೂಪದಲ್ಲಿ ಅನ್ನಬ್ರಹ್ಮ ಚಾತುರ್ಮಾಸ್ಯಕ್ಕೆ ಸುವಸ್ತುಗಳನ್ನು ಸಮರ್ಪಿಸಿದರು. ಹೊರನಾಡಿನ ಧರ್ಮದರ್ಶಿಗಳ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

ಶ್ರೀಗಳ ವರ್ಧಂತಿಯ ಅಂಗವಾಗಿ ಅರುಣ ಮಂತ್ರ ಪೂರ್ವಕ ಗುರು ಅರುಣ ನಮಸ್ಕಾರ ವಿಶೇಷವಾಗಿ ನೆರವೇರಿತು. ಅರುಣಪ್ರಶ್ನ ಪಾರಾಯಣ, ಅರುಣ ಹವನ, ಆಯುಷ್ಕಾಮೇಷ್ಠಿ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಶ್ರೀಮಾತೆ ಶ್ರೀಮತಿ ವಿಜಯಲಕ್ಷ್ಮೀ ಭಟ್ ಅವರಿಗೆ ಮಾತೆಯರು ಭಾಗಿನ ಸಮರ್ಪಿಸಿ, ಗೌರವಸಲ್ಲಿಸಿದರು. ಶ್ರೀಮಠದ ಧರ್ಮಕರ್ಮ ಖಂಡದ ಸಮರ್ಥ ಭಟ್ಟ ಮಂಕಳಲೆ, ವಿನಾಯಕ ಬೆಟ್ಕೂರು, ಕೇಶವಕಿರಣ, ಡಾ. ರಾಮಕೃಷ್ಣ ಭಟ್ ಕೂಟೇಲು, ಮಾತೃತ್ವಂನ ಪ್ರಮುಖರಾದ ಈಶ್ವರೀ ಬೇರ್ಕಡವು, ಸ್ವಾತಿ ಭಾಗ್ವತ್, ಗೀತಾ ಯಾಜಿ, ದಿನ ಪ್ರಧಾನರಾದ ಕೃಷ್ಣಾನಂದ ಭಟ್ ದಂಪತಿಗಳು ಉಪಸ್ಥಿತಿತರಿದ್ದರು.



