ಆರೋಗ್ಯಕರವಾದ ರಾಗಿ ಪಕೋಡ ಹೀಗೆ ಮಾಡಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೇಕಾಗುವ ಪದಾರ್ಥಗಳು

1/2 ಕಪ್ ರಾಗಿ ಹಿಟ್ಟು
1/2 ಕಪ್‌ ಕಡಲೆ ಬೀಜ
7 ಮೆಣಸಿನಕಾಯಿ
ಉಪ್ಪು – ರುಚಿಗೆ ತಕ್ಕಂತೆ
1 ಟೀಸ್ಪೂನ್ ಜೀರಿಗೆ
250 ಗ್ರಾಂ ಈರುಳ್ಳಿ
ಎಣ್ಣೆ

ಮಾಡುವ ವಿಧಾನ

ಮೊದಲಿಗೆ ಒಂದು ಮಿಕ್ಸಿ ಜಾರಿಗೆ ಕಡೆಲೆಬೀಜ ಮೆಣಸಿನ ಕಾಯಿ ತರಿತರಿಯಾಗಿ ರುಬ್ಬಿಕೊಳ್ಳಿ. ಒಂದು ಮಿಕ್ಸಿಂಗ್‌ ಬೌಲ್‌ಗೆ ಕತ್ತರಿಸಿದ ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಲಕಿ. ಈಗ ಅದಕ್ಕೆ ರಾಗಿ ಹಿಟ್ಟು ಹಾಗೆಯೆ ಮಿಕ್ಸಿ ಮಾಡಿದ ಕಡಲೆಬೀಜದ ಪುಡಿ ಸೇರಿಸಿ ಚೆನ್ನಾಗಿ ಕಲಸಿ. ಒಂದಷ್ಟು ಜೀರಿಗೆ ಅಗತ್ಯವಿದ್ದರೆ ನೀರು ಸೇರಿಸಿ ಹೆಚ್ಚು ತೆಳುವಾಗದೆ ಗಟ್ಟಿಯಾಗಿಯೇ ಹಿಟ್ಟನ್ನು ರೆಡಿಮಾಡಿಕೊಳ್ಳಿ. ನಂತರ ಕಾದ ಎಣ್ಣೆಯಲ್ಲಿ ಉದುರು ಉದುರಾಗಿ ಹಾಕಿ ಕಂದು ಬಣ್ಣ ಬರುತ್ತಿದ್ದಂತೆ ತೆಗೆದುಬಿಡಿ. ಅಷ್ಟೇ ಗರಿಗರಿಯಾದ ಆರೋಗ್ಯಕ್ಕೆ ಒಳ್ಳೆಯದಾದ ರಾಗಿ ಪಕೋಡ ರೆಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!