ಹೊಸದಿಗಂತ ಡಿಜಿಟಲ್ ಡೆಸ್ಕ್:
‘ರಾಮಾಯಣ’ ಸಿನಿಮಾ ಮೇಲಿದ್ದ ನೆಗೆಟಿವಿಟಿ ಎಲ್ಲಾ ಒಂದೇ ಹಾಡಿಗೆ ಮಾಯವಾಗಿದೆ. ಹೌದು, ಗಣೇಶ ಚತುರ್ಥಿ ಹಬ್ಬದ ಶುಭ ದಿನದಂದು ಚಿತ್ರತಂಡ ‘ಜೈ ಜೈ ರಾಮ್’ ಅನ್ನೋ ಸಾಂಗ್ ಬಿಡುಗಡೆ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗ್ತಿದೆ.
ಈ ಮುಂಚೆ ಬಂದಿದ್ದ ಪೋಸ್ಟರ್, ಟ್ರೇಲರ್ ನೋಡಿ ಜನ ಮಿಕ್ಸ್ಡ್ ರೆಸ್ಪಾನ್ಸ್ ಕೊಟ್ಟಿದ್ರು, ಇದರಿಂದ ಪ್ರೊಡ್ಯೂಸರ್ಸ್‌ಗೆ ಕೊಂಚ ಟೆನ್ಷನ್ ಆಗಿತ್ತು. ಆದ್ರೆ ಈಗ ಬಿಡುಗಡೆಯಾಗಿರೋ ಈ ಒಂದೇ ಹಾಡು ಇಡೀ ಪಿಕ್ಚರ್ ಹೈಪ್ ಅನ್ನೇ ಬದಲಾಯಿಸಿಬಿಟ್ಟಿದೆ.
ಆಸ್ಕರ್ ವಿನ್ನರ್ ಎ.ಆರ್. ರೆಹಮಾನ್ ಮ್ಯೂಸಿಕ್, ಕುಮಾರ್ ವಿಶ್ವಾಸ್ ಅವರ ಪವರ್‌ಫುಲ್ ಸಾಹಿತ್ಯ, ಜೊತೆಗೆ ಅರಿಜಿತ್ ಸಿಂಗ್ ಮತ್ತೆ ಶ್ರೇಯಾ ಘೋಷಾಲ್ ಅವರ ಕಂಠಸಿರಿ ಸೇರಿ ಹಾಡನ್ನ ಬೇರೆನೇ ಲೆವೆಲ್‌ಗೆ ತಗೊಂಡು ಹೋಗಿದೆ. ‘ಜೈ ಜೈ ರಾಮ್’ ಅನ್ನೋ ಒಂದೇ ಸಾಲಿನಲ್ಲಿ ಇಡೀ ಸಿನಿಮಾಗೆ ಒಂದು ಪಾಸಿಟಿವ್ ವೈಬ್ ತಂದುಕೊಟ್ಟಿದ್ದಾರೆ.
ನಿತೇಶ್ ತಿವಾರಿ ನಿರ್ದೇಶನದ ಈ ಗ್ರಾಂಡ್ ಸಿನಿಮಾ ಎರಡು ಪಾರ್ಟ್‌ನಲ್ಲಿ ಬರ್ತಿದ್ದು, ಮೊದಲ ಭಾಗ ಇದೇ ನವೆಂಬರ್ 6ಕ್ಕೆ ದೀಪಾವಳಿ ಧಮಾಕವಾಗಿ ಥಿಯೇಟರ್‌ಗೆ ಅಪ್ಪಳಿಸಲಿದೆ. ಎರಡನೇ ಪಾರ್ಟ್ 2027ರ ದೀಪಾವಳಿಗೆ ಪ್ಲಾನ್ ಆಗಿದೆ. ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ, ರಾಕಿ ಭಾಯ್ ಯಶ್ ರಾವಣನಾಗಿ ಮತ್ತೆ ಸನ್ನಿ ಡಿಯೋಲ್ ಹನುಮಂತನಾಗಿ ಕಾಣಿಸ್ಕೋತಿದ್ದಾರೆ. ಸಿನಿಮಾ ರಿಲೀಸ್‌ಗೆ ಜಸ್ಟ್ ಎರಡು ತಿಂಗಳು ಬಾಕಿ ಇರೋವಾಗ್ಲೇ ಈ ಹಾಡು ಸೂಪರ್ ಹಿಟ್ ಆಗಿರೋದು ಚಿತ್ರತಂಡದ ಎನರ್ಜಿನ ಡಬಲ್ ಮಾಡಿದೆ.



