ಮರಳಿ ಸರ್ಕಾರಿ ಬಂಗಲೆಯತ್ತ ರಾಹುಲ್ ಗಾಂಧಿ: ಇಡೀ ಭಾರತವೇ ನನ್ನ ಮನೆ ಎಂದ ಕಾಂಗ್ರೆಸ್ ನಾಯಕ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಸಂಸತ್ ಸ್ಥಾನವನ್ನು ಮರುಸ್ಥಾಪಿಸಲಾಗಿದ್ದು, ಈ ಹಿನ್ನೆಲೆ ದೆಹಲಿಯ ಸರ್ಕಾರಿ ಬಂಗಲೆಯನ್ನು ಅವರಿಗೆ ವಾಪಸ್ ನೀಡಲಾಗಿದೆ.

2019ರ ಮೋದಿ ಉಪನಾಮ (Modi Surname) ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿಗೆ (Rahul Gandhi)ವಿಧಿಸಲಾಗಿದ್ದ ಶಿಕ್ಷೆಗೆ ಸುಪ್ರೀಂಕೋರ್ಟ್ (Supreme Court) ತಡೆಯಾಜ್ಞೆ ನೀಡಿದ ನಂತರ ಕಾಂಗ್ರೆಸ್ ಸಂಸತ್ ಸ್ಥಾನವನ್ನು ಮರುಸ್ಥಾಪಿಸಿಯ್ಯು.

ಇದೀಗ ಲೋಕಸಭೆಯ ಸದನ ಸಮಿತಿಯು 12, ತುಘಲಕ್ ಲೇನ್‌ನಲ್ಲಿರುವ ರಾಹುಲ್ ಗಾಂಧಿ ಅವರ ಹಳೆಯ ಬಂಗಲೆಯನ್ನು ವಾಪಸ್ ನೀಡಿದೆ .

ಆಧಿಕೃತ ನಿವಾಸವನ್ನು ಮರಳಿ ಪಡೆಯುವ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ, ‘ಮೇರಾ ಘರ್ ಪೂರಾ ಹಿಂದೂಸ್ತಾನ್ ಹೈ (ಇಡೀ ಭಾರತವೇ ನನ್ನ ಮನೆ)’ ಎಂದು ರಾಹುಲ್ ಹೇಳಿದರು.

ಏಪ್ರಿಲ್‌ನಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಸೂರತ್ ನ್ಯಾಯಾಲಯದ ಶಿಕ್ಷೆಯ ನಂತರ ಮಾರ್ಚ್‌ನಲ್ಲಿ ರಾಹುಲ್ ಗಾಂಧಿಯನ್ನು ಸಂಸತ್ ಸ್ಥಾನದಿಂದ ಅನರ್ಹಗೊಳಿಸಲಾಗಿತ್ತು. ಇದಾದ ನಂತರ ಪ್ರೊಟೋಕಾಲ್‌ಗೆ ಅನುಗುಣವಾಗಿ ರಾಹುಲ್ ಗಾಂಧಿ ತಮ್ಮ ಅಧಿಕೃತ ನಿವಾಸವನ್ನು ತೊರೆದಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!