VIRAL PHOTO| ಬೈಕ್ ಮೆಕ್ಯಾನಿಕ್ ಆದ ರಾಹುಲ್ ಗಾಂಧಿ: ಆಶ್ಚರ್ಯಚಕಿತರಾದ ಜನ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪಕ್ಷದ ಸದಸ್ಯರೊಂದಿಗೆ ನಿತ್ಯ ಸಭೆ, ಪಕ್ಷದ ಚಟುವಟಿಕೆಗಳಲ್ಲಿ ಬ್ಯುಸಿಯಾಗಿ ಕಾಣುತ್ತಿದ್ದ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ದೆಹಲಿಯ ಬೀದಿಗಳಲ್ಲಿ ಬೈಕ್ ಮೆಕ್ಯಾನಿಕ್ ಆಗಿ ಬದಲಾಗಿದ್ದಾರೆ. ಮೆಕ್ಯಾನಿಕ್ ಶೆಡ್ ನಲ್ಲಿ ರಾಹುಲ್ ಬೈಕ್ ರಿಪೇರಿ ಮಾಡುತ್ತಿರುವುದು ಕಂಡು ಬಂದಿದ್ದು, ಈ ಸಂಬಂಧ ಫೋಟೋಗಳನ್ನು ಸ್ವತಃ ರಾಹುಲ್ ಗಾಂಧಿ ತಮ್ಮ ಅಧಿಕೃತ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋಗಳು ಇದೀಗ ವೈರಲ್ ಆಗಿವೆ.

ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಮಂಗಳವಾರ ಸಂಜೆ ದೆಹಲಿಯ ಕರೋಲ್ ಬಾಗ್ ಮಾರುಕಟ್ಟೆಯಲ್ಲಿರುವ ಬೈಕ್ ರಿಪೇರಿ ಅಂಗಡಿಗಳಿಗೆ ಭೇಟಿ ನೀಡಿದರು. ರಾಹುಲ್ ಅವರನ್ನು ಸ್ಥಳೀಯರು ಅದ್ಧೂರಿಯಾಗಿ ಸ್ವಾಗತಿಸಿದರು. ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಮಾಡಿದಂತೆಯೇ ಜನರೊಂದಿಗೆ ತಮ್ಮ ಸಂವಾದವನ್ನು ಮುಂದುವರೆಸಿದ ರಾಹುಲ್, ಸ್ಥಳೀಯ ಉದ್ಯಮಿಗಳು ಮತ್ತು ಕಾರ್ಮಿಕರೊಂದಿಗೆ ಸಂವಾದ ನಡೆಸಿದರು. ಬಳಿಕ ಬೈಕ್ ಮೆಕ್ಯಾನಿಕ್ ಶೆಡ್‌ಗೆ ಹೋಗಿ ಬೈಕ್ ರಿಪೇರಿ ಮಾಡುತ್ತಿರುವುದು ಕಂಡು ಬಂದಿದೆ.

ಸಂಜೆ 5.30ರ ಸುಮಾರಿಗೆ ಕರೋಲ್ ಬಾಗ್ ಪ್ರದೇಶಕ್ಕೆ ತೆರಳಿದ ರಾಹುಲ್ ರಾತ್ರಿ 7ರವರೆಗೆ ಅಲ್ಲಿಯೇ ಇದ್ದರು. ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿಗೆ ಆಗಮಿಸಿ ರಾಹುಲ್ ಅವರನ್ನು ನೋಡಿ ಕೈಕುಲುಕಿದರು. ಟ್ರಕ್ ಚಾಲಕರ ಸಮಸ್ಯೆಗಳನ್ನು ಆಲಿಸಲು ರಾಹುಲ್ ಇತ್ತೀಚೆಗೆ ದೆಹಲಿಯಿಂದ ಚಂಡೀಗಢಕ್ಕೆ ಟ್ರಕ್‌ನಲ್ಲಿ ಪ್ರಯಾಣಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!