ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅಮೇಥಿಯಿಂದ ಸ್ಪರ್ಧಿಸಲಿದ್ದಾರೆ ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ರಾಯ್ ಹೇಳಿದ್ದಾರೆ.
ಈ ಮೂಲಕ ರಾಹುಲ್ ಗಾಂಧಿ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ್ದು, “ಖಂಡಿತವಾಗಿಯೂ ರಾಹುಲ್ ಗಾಂಧಿ ಅಮೇಥಿ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ.
ಅಮೇಥಿಯ ಜನರು ಇಲ್ಲಿಗೆ ಬಂದಿದ್ದಾರೆ . ಅದೇ ರೀತಿ ಪ್ರಿಯಾಂಕಾ ಗಾಂಧಿ ವಾರಣಾಸಿಯಿಂದ ಸ್ಪರ್ಧಿಸುವುದು ಬಯಸಿದ್ರೆ, ನಮ್ಮ ಪ್ರತಿಯೊಬ್ಬ ಕಾರ್ಯಕರ್ತರು ಅವರ ಯಶಸ್ಸಿಗಾಗಿ ದುಡಿಯುತ್ತಾರೆ ಎಂದು ಹೇಳಿದರು.
2024ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಭರ್ಜರಿ ತಯಾರಿ ನಡೆಸಲಾಗುತ್ತಿದೆ. ಈಗಾಗಲೇ I.N.D.I.A ಕೂಟವನ್ನು ರಚಿಸಿಕೊಂಡು,ಕೇಂದ್ರ ಸರಕಾರದ ವಿರುದ್ಧ ಅಧಿಕಾರಕ್ಕೇರಲು ರಣತಂತ್ರ ರೂಪಿಸುತ್ತಿದೆ.