ರಾಹುಲ್​ ಗಾಂಧಿ ಒಳ್ಳೆಯ ಮನುಷ್ಯ, ಆದರೆ…: ಗುಲಾಂ ನಬಿ ಆಜಾದ್​

ಹೊಸದಿಗಂತ ಡಿಜಿಟಲ್‌ ಡೆಸ್ಕ್

ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ಬಳಿಕ ಗುಲಾಂ ನಬಿ ಆಜಾದ್​ ಮಾತು ಆಡಿದ್ದಾರೆ .
ರಾಹುಲ್​ ಗಾಂಧಿ ಒಳ್ಳೆಯ ಮನುಷ್ಯ. ಆದರೆ ರಾಜಕೀಯಕ್ಕೆ ಬೇಕಾದ ಗುಣಗಳನ್ನು ಆತ ಹೊಂದಿಲ್ಲ. ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುವುದೇ ಆತನ ನೀತಿಯಾಗಿದೆ ಎಂದರು.ಕಾಂಗ್ರೆಸ್​ನ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಅರ್ಥಹೀನವಾಗಿದೆ. ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯವರ ಅವರ ಕಾಲದಲ್ಲಿ ನಡೆಯುತ್ತಿದ್ದ ಸಮಾಲೋಚನಾ ಪ್ರಕ್ರಿಯೆ ಈಗ ಅಲ್ಲಿ ಕಾಣುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸೋನಿಯಾ ಗಾಂಧಿಗೆ ನೀಡಿದ ಐದು ಪುಟಗಳ ರಾಜೀನಾಮೆ ಪತ್ರದಲ್ಲಿ, ಆಜಾದ್ 2014 ರ ಚುನಾವಣೆ ಸೋಲಿಗೆ ರಾಹುಲ್ ಗಾಂಧಿಯವರನ್ನು ದೂಷಿಸಿದ್ದರು. ರಾಹುಲ್‌ ವರ್ತನೆ ಚಿಕ್ಕ ಮಕ್ಕಳಂತಿದೆ. ಸ್ವಪಕ್ಷದಲ್ಲಿಯೇ ತಮ್ಮನ್ನು ಮೂಲೆಗುಂಪು ಮಾಡಿರುವ ಭಾವನೆ ತಮಗೆ ವ್ಯಕ್ತವಾಗುತ್ತಿದೆ ಎಂದು ಗುಲಾಂ ನಬಿ ಆಜಾದ್ ಬೇಸರಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!