ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್‌ನಲ್ಲೇ ಇದ್ದು ಬಿಜೆಪಿ ಪರ ಕೆಲಸ ಮಾಡುವ ನಾಯಕರನ್ನು ಪಕ್ಷದಿಂದಲೇ ಉಚ್ಚಾಟಿಸುವಂಥ ಕಠಿಣ ಕ್ರಮಕ್ಕೂ ತಯಾರಿದ್ದೇವೆ ಎಂದು ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಕಾಂಗ್ರೆಸ್‌ನಲ್ಲಿದ್ದುಕೊಂಡೇ ರಹಸ್ಯವಾಗಿ ಬಿಜೆಪಿ ಪರ ಕೆಲಸ ಮಾಡುತ್ತಿರುವವರು ಹೊರಹೋಗಬೇಕು, ಅವರು ಬಿಜೆಪಿ ಪರ ಬಹಿರಂಗವಾಗಿ ಕೆಲಸ ಮಾಡಲಿ. ಅಗತ್ಯಬಿದ್ದರೆ ಹತ್ತು ಮಂದಿಯಾದರೂ ಸರಿ, 40 ಮಂದಿಯಾದರೂ ಸರಿ ನಾವು ಪಕ್ಷದಿಂದ ಹೊರಹಾಕಲು ಸಿದ್ಧ ಎಂದು ಹೇಳಿದ್ದಾರೆ.
ನಾವು ಪಕ್ಷದ ಹಿತದೃಷ್ಟಿಯಿಂದ ಕಾಂಗ್ರೆಸ್‌ನಲ್ಲಿರುವ ಎರಡು ಗುಂಪಿನ ನಾಯಕರು ಮತ್ತು ಕಾರ್ಯಕರ್ತರನ್ನು ಪ್ರತ್ಯೇಕಿಸುವುದು. ಮೊದಲನೆಯ ಗುಂಪು ಪಕ್ಷದ ಸಿದ್ಧಾಂತ ಹೃದಯದಲ್ಲಿಟ್ಟುಕೊಂಡವರು. ಇನ್ನೊಂದು ಗುಂಪು ಬಿಜೆಪಿ ಜತೆ ಗುರುತಿಸಿಕೊಂಡವರು. ಈ ಎರಡು ಗುಂಪುಗಳನ್ನು ಪ್ರತ್ಯೇಕಿಸುವ ಕೆಲಸವಾಗದೆ ಹೋದರೆ ಗುಜರಾತಿನ ಜನರಿಗೆ ಯಾವತ್ತಿಗೂ ಪಕ್ಷದ ಮೇಲೆ ನಂಬಿಕೆ ಬರುವುದಿಲ್ಲ ಎಂದರು.