ಅಧಿವೇಶನದ ಮೊದಲ ದಿನವೇ ರಾಹುಲ್ ಗಾಂಧಿ ಲೇಟ್: ರಾಷ್ಟ್ರಗೀತೆಗೆ ಕಾಂಗ್ರೆಸ್ ನಾಯಕ ಚಕ್ಕರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಲೋಕಸಭೆಯ 18ನೇ ಅಧಿವೇಶನದ ಮೊದಲ ದಿನವೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸದನಕ್ಕೆ ತಡವಾಗಿ ಆಗಮಿಸಿದ್ದಾರೆ.

ಅಧಿವೇಶನ ಆರಂಭಕ್ಕೂ ಮುನ್ನ ಲೋಕಸಭೆಯಲ್ಲಿ ರಾಷ್ಟ್ರಗೀತೆ ಹಾಡಲಾಯ್ತು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಹುತೇಕ ಎಲ್ಲಾ ಸಂಸದರು ಹಾಜರಿದ್ದರು. ಆದ್ರೆ ರಾಷ್ಟ್ರಗೀತೆ ಮುಗಿಯುವ ವೇಳೆ ಅಂದ್ರೆ ಕೊನೆ ಕ್ಷಣದಲ್ಲಿ ರಾಹುಲ್ ಗಾಂಧಿ ಸದನದೊಳಗೆ ಬರುತ್ತಿರುವ ವಿಡಿಯೋ ತುಣುಕು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಡವಾಗಿ ಬಂದಿರೋ ರಾಹುಲ್ ಗಾಂಧಿಯವರನ್ನು ನೆಟ್ಟಿಗರು ಟೀಕಿಸುತ್ತಿದ್ದಾರೆ. ತಡವಾಗಿ ಆಗಮಿಸುವ ಮೂಲಕ ರಾಹುಲ್ ಗಾಂಧಿ ರಾಷ್ಟ್ರಗೀತೆಗೆ ಅಗೌರವಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇಷ್ಟು ಮಾತ್ರವಲ್ಲದೇ ರಾಹುಲ್ ಗಾಂಧಿಯವರ ಬದ್ದತೆಯನ್ನು ಸಹ ಕೆಲವರು ಪ್ರಶ್ನೆ ಮಾಡಿದ್ದಾರೆ. ಇತ್ತ ಮತ್ತೊಂದೆಡೆ ತಡವಾಗಿ ಆಗಮಿಸಿರೋದರಲ್ಲಿ ತಪ್ಪೇನಿದೆ ಎಂದು ರಾಹುಲ್ ಗಾಂಧಿಯವರನ್ನು ಕೆಲವರು ಸಮರ್ಥಿಸಿಕೊಂಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಆಂಧ್ರಪ್ರದೇಶದ ಬಿಜೆಪಿ ನಾಯಕ ವಿಷ್ಣು ವರ್ಧನ್ ರೆಡ್ಡಿ, ಯುವರಾಜ ರಾಹುಲ್ ಗಾಂಧಿ ತಮ್ಮನ್ನು ರಾಷ್ಟ್ರಗೀತೆಗಿಂತ ದೊಡ್ಡವರು ಎಂದು ತಿಳಿದುಕೊಂಡಿದ್ದಾರೆ. ಹಾಗಾಗಿಯೇ ರಾಷ್ಟ್ರಗೀತೆ ಮುಗಿದ ನಂತರ ಸದನದೊಳಗೆ ಬಂದಿದ್ದಾರೆ ಎಂದು ಟೀಕಿಸಿದ್ದಾರೆ.

https://x.com/SVishnuReddy/status/1805129867958313217?ref_src=twsrc%5Etfw

ಓರ್ವ ಬಳಕೆದಾರ ಸಂಸತ್ತಿನ ಪ್ರತಿ ಅಧಿವೇಶನ ರಾಷ್ಟ್ರಗೀತೆಯೊಂದಿಗೆ ಪ್ರಾರಂಭವಾಗುತ್ತದೆ. ಪ್ರಧಾನಮಂತ್ರಿ, ಸಂಪುಟ ಸಚಿವರು ಹಾಗೂ ಸಂಸದರು ಸೇರಿದಂತೆ ಎಲ್ಲಾ ಸಂಸದರು ಈ ಸಮಯದಲ್ಲಿ ಹಾಜರಿರುತ್ತಾರೆ. ಆದ್ರೆ ರಾಷ್ಟ್ರಗೀತೆ ಮುಗಿಯುತ್ತಿದ್ದಂತೆ ರಾಹುಲ್ ಗಾಂಧಿ ಸದನದೊಳಗೆ ಬರುತ್ತಾರೆ. ಈ ರೀತಿ ರಾಹುಲ್ ಗಾಂಧಿ ಉದ್ದೇಶಪೂರ್ವಕವಾಗಿ ಮಾಡಿದ್ದಾರೆಯೇ? ಇದು ಭಾರತಕ್ಕೆ ತೋರಿದ ಅಗೌರವ ಅಲ್ಲವೇ? ಇಂತಹವರು ಭಾರತದ ಜನತೆಗೆ ನಿಷ್ಠರಾಗಿರುತ್ತಾರೆಯೇ ಎಂದು ಪ್ರಶ್ನೆ ಮಾಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!