October 19, 2026
Monday, October 19, 2026
spot_img

ಎಸ್‌ಐಆರ್‌ ಪ್ರತಿಭಟನೆ ನಡುವೆ ವಿಯೆಟ್ನಾಂಗೆ ಹೊರಟ ರಾಹುಲ್‌ ಗಾಂಧಿ: ಕಾರಣ ಏನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆಯನ್ನು ವಿರೋಧಿಸಿ ಕಾಂಗ್ರೆಸ್‌ ಬೃಹತ್‌ ಪ್ರತಿಭಟನೆ ನಡೆಸುತ್ತಿದೆ. ಈ ಮಧ್ಯೆ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ವಿದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ. ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾಗಾ ವಿಯೆಟ್ನಾಂಗೆ ಪ್ರಯಾಣ ಬೆಳೆಸಿದ್ದು, ಹನೋಯಿ ಏರ್‌ಪೋರ್ಟ್‌ಗೆ ತೆರಳಲಿದ್ದಾರೆ.

ಉತ್ತರ ಪ್ರದೇಶದ ರಾಯ್ ಬರೇಲಿ ಲೋಕಸಭಾ ಕ್ಷೇತ್ರದ ಸದಸ್ಯರಾಗಿರುವ ರಾಹುಲ್ ಗಾಂಧಿ, ವೈಯಕ್ತಿಕ ಭೇಟಿಗಾಗಿ ಹನೋಯಿಗೆ ತೆರಳಿದ್ದಾರೆಯೇ ಅಥವಾ ಅಲ್ಲಿ ನಡೆಯುವ ಯಾವುದಾದ್ರೂ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆಯೇ? ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಕುರಿತು ಕಾಂಗ್ರೆಸ್ ಪಕ್ಷದಿಂದ ಯಾವುದೇ ಅಧಿಕೃತ ಹೇಳಿಕೆಯೂ ಬಂದಿಲ್ಲ.

ಈ ವರ್ಷದ ಜನವರಿಯಲ್ಲಿಯೂ ರಾಹುಲ್ ಗಾಂಧಿ ವಿಯೆಟ್ನಾಂಗೆ ಭೇಟಿ ನೀಡಿದ್ದರು. ಆಗ, ಅವರನ್ನು ವಿದೇಶಿ ಕಾರ್ಯಕ್ರಮಗಳಿಗೆ ಆಹ್ವಾನಿಸುವವರು ಯಾರೆಂಬುದನ್ನು ಕಾಂಗ್ರೆಸ್ ಬಹಿರಂಗಪಡಿಸಬೇಕು ಎಂದು ಬಿಜೆಪಿ ಆಗ್ರಹಿಸಿತ್ತು.

Must Read