ಲಡಾಖ್‌ನ ಪಾಂಗೊಂಗ್ ಸರೋವರಕ್ಕೆ ಬೈಕ್‌ ರೈಡ್‌ ನಲ್ಲಿ ರಾಹುಲ್‌ ಗಾಂಧಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಲಡಾಖ್‌ ಪ್ರವಾಸದಲ್ಲಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಪಾಂಗೊಂಗ್ ಸರೋವರಕ್ಕೆ ಬೈಕ್‌ ರೈಡ್‌ ಮಾಡಿದ್ದಾರೆ.ಈ ಬಗ್ಗೆ ರಾಹುಲ್‌ ಅವರ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದು, KTM 390 ಬೈಕ್‌ ಅನ್ನು ರಾಹುಲ್‌ ಚಲಾಯಿಸಿದ್ದಾರೆ.

ಪೋಸ್ಟ್‌ ಹಂಚಿಕೊಂಡ ರಾಹುಲ್‌ ‘ ಪಾಂಗೊಂಗ್ ಸರೋವರಕ್ಕೆ ಹೊರಟಿದ್ದೇವೆ, ಇದು ಜಗತ್ತಿನ ಅತಿ ಸುಂದರ ಪ್ರದೇಶಗಳಲ್ಲಿ ಒಂದು ಎಂದು ನನ್ನ ತಂದೆಯವರು ಯಾವಾಗಲೂ ಹೇಳುತ್ತಿದ್ದರು’ ಎಂದು ಬರೆದುಕೊಂಡಿದ್ದಾರೆ.

ಕಾಂಗ್ರೆಸ್‌ ಟ್ವಿಟರ್‌ (ಎಕ್ಸ್‌)ನಲ್ಲಿಯೂ ಅಪರೂಪದ ಕ್ಷಣಗಳ ಕೆಲವು ಫೋಟೊಗಳನ್ನು ಹಂಚಿಕೊಳ್ಳಲಾಗಿದೆ.

ರಾಹುಲ್‌ ಗಾಂಧಿ ಅವರು ಆಗಸ್ಟ್‌ 25ರವರೆಗೆ ಲಡಾಖ್‌ನಲ್ಲಿ ಇರಲಿದ್ದಾರೆ. ಆರ್ಟಿಕಲ್ 370 ರದ್ದತಿಯ ನಂತರ ಜಮ್ಮು ಮತ್ತು ಕಾಶ್ಮೀರವನ್ನು ‘ಲಡಾಖ್ ಮತ್ತು ಜಮ್ಮು ಕಾಶ್ಮೀರ’ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ನಂತರ ಇದು ರಾಹುಲ್ ಅವರ ಮೊದಲ ಲಡಾಖ್ ಭೇಟಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!