ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಆರ್ಥಿಕತೆಯನ್ನು ಅಸ್ಥಿರಗೊಳಿಸಲು ಅಮೆರಿಕ ಮೂಲದ ಉದ್ಯಮಿ ಜಾರ್ಜ್ ಸೊರೊಸ್ ಮುಂದಾಗಿದ್ದು, ಅವರ ಜೊತೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಕೈಜೋಡಿಸಿ ಭಾರತದ ವಿರುದ್ಧ ಪಿತೂರಿ ನಡೆಸುತ್ತಿರುವ ವ್ಯಕ್ತಿಗಳಿಗೆ ಬೆಂಬಲ ನೀಡುತ್ತಿರುವ ದೇಶದ್ರೋಹಿ ಎಂದು ಬಿಜೆಪಿ ಸಂಸದ ಸಂಬಿತ್ ಪಾತ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
OCCRP ಸಂಸ್ಥೆಗೆ ಜಾರ್ಜ್ ಸೊರೊಸ್ ಹಣವನ್ನು ನೀಡುತ್ತಾರೆ. ಈ OCCRP ಭಾರತದ ಆರ್ಥಿಕತೆಗೆ ಸಂಬಂಧಿಸಿದಂತೆ ಸುಳ್ಳು ವರದಿಗಳನ್ನು ಪ್ರಕಟಿಸುತ್ತದೆ.
ಜಾರ್ಜ್ ಸೊರೊಸ್ ಮತ್ತು ರಾಹುಲ್ ಗಾಂಧಿ ದೇಹಗಳು ಬೇರೆ ಬೇರೆಯಾದರೂ ಆತ್ಮ ಮಾತ್ರ ಒಂದೇ. ಇವರಿಬ್ಬರು ದೇಶದ ಹಿತಾಸಕ್ತಿಗೆ ಧಕ್ಕೆ ತರಲು ಬಯಸುತ್ತಾರೆ ಎಂದು ದೂರಿದ್ದಾರೆ.