Wednesday, June 7, 2023

Latest Posts

ರಾಜ್ಯ ಚುನಾವಣಾ ಅಖಾಡಕ್ಕೆ ರಾಹುಲ್ ಗಾಂಧಿ: ಏ.23ರಂದು ಕೂಡಲಸಂಗಮಕ್ಕೆ ಭೇಟಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ಚುನಾವಣಾ ಅಖಾಡ ಕಾವೇರುತ್ತಿದ್ದು, ರಾಜಕೀಯ ಪಕ್ಷಗಳ ಸ್ಟಾರ್ ಪ್ರಚಾರಕರು ಆಗಮಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಇದರ ಭಾಗವಾಗಿ ಕಾಂಗ್ರೆಸ್​ (Congress) ನಾಯಕ ರಾಹುಲ್​ ಗಾಂಧಿಯವರು (Rahul Gandhi) ಕರುನಾಡಿಗೆ ಆಗಮಿಸುತ್ತಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಕೋಲಾರಕ್ಕೆ (Kolar) ಭೇಟಿ ನೀಡಿದ್ದ ಅವರು, ನಾಳೆ (ಏ.23) ರಂದು ಬಾಗಲಕೋಟೆ (Bagalkot), ವಿಜಯಪುರ (Vijayapura) ಜಿಲ್ಲೆಗಳ ಪ್ರವಾಸ ಕೈಗೊಳ್ಳಲಿದ್ದಾರೆ.

ಬೆಳಗ್ಗೆ 7.20ಕ್ಕೆ ದೆಹಲಿಯಿಂದ ಹೊರಟು ಹೈದರಾಬಾದ್ ತಲಪುತ್ತಾರೆ. ಹೈದರಾಬಾದ್​​ನಿಂದ ಬೆಳಿಗ್ಗೆ 10ಕ್ಕೆ​ ಹೊರಟು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿಯಲಿದ್ದಾರೆ. 10.50ಕ್ಕೆ ಹುಬ್ಬಳ್ಳಿಯಿಂದ ಕೂಡಲಸಂಗಮದತ್ತ ಪ್ರಯಾಣ ಬೆಳಸುವ ರಾಹುಲ್ ಗಾಂಧಿಯವರು 11.40ಕ್ಕೆ ಜಗಜ್ಯೋತಿ ಬಸವೇಶ್ವರರ ಐಕ್ಯ ಸ್ಥಳವನ್ನು ತಲುಪುತ್ತಾರೆ.ನಂತರ ಮಧ್ಯಾಹ್ನ 12.10ರವರೆಗೆ ಕೂಡಲಸಂಗಮದಲ್ಲಿರುವ ಬಸವಣ್ಣನವರ ಐಕ್ಯ ಮಂಟಪಕ್ಕೆ ತೆರಳಿ ದರ್ಶನ ಪಡೆಯುತ್ತಾರೆ. ಬಳಿಕ ಬಸವ ಜಯಂತಿ ನಿಮಿತ್ತ ಕೂಡಲಸಂಗಮದ ಬಸವ ಮಂಟಪದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ. ನಂತರ 1:40 ರಿಂದ 2:10ರವರೆಗೆ ದಾಸೋಹ ಭವನದಲ್ಲಿ ಪ್ರಸಾದ ಸೇವಿಸಲಿದ್ದಾರೆ.

ಮಧ್ಯಾಹ್ನ 2.15ರಿಂದ 4.15ರವರೆಗೆ ಯಾತ್ರಿ ನಿವಾಸದಲ್ಲಿ ವಿಶ್ರಾಂತಿ ಪಡೆದು, ಸಂಜೆ 4.25ಕ್ಕೆ ಹೆಲಿಕಾಪ್ಟರ್ ಮೂಲಕ ವಿಜಯಪುರದತ್ತ ಪ್ರಯಾಣ ಬೆಳಸುತ್ತಾರೆ. ಸಂಜೆ 4.50ಕ್ಕೆ ವಿಜಯಪುರಕ್ಕೆ ಆಗಮಿಸಲಿರುವ ರಾಹುಲ್ ಗಾಂಧಿಯವರು, ಸಂಜೆ 5ರಿಂದ 6.30ರವರೆಗೆ ರೋಡ್ ಶೋ ನಡೆಸಲಿದ್ದಾರೆ. ವಿಜಯಪುರದ ಶಿವಾಜಿ ಚೌಕ್​ನಿಂದ ಆರಂಭವಾದ ರೋಡ್​ ಶೋ ಕನಕದಾಸ ವೃತ್ತದಲ್ಲಿ ಅಂತ್ಯವಾಗುತ್ತೆ. ರಾತ್ರಿ ವಿಜಯಪುರದಲ್ಲೇ ವಾಸ್ತವ್ಯ ಹೂಡಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!