ಹೊಸದಿಗಂತ ಡಿಜಿಟಲ್ ಡೆಸ್ಕ್:
ಗ್ಯಾರೆಂಟಿ ಸರಕಾರದ ಲೋಡ್ ಶೆಡ್ಡಿಂಗ್ ಭೂತ ಕೇವಲ ರೈತರನ್ನಷ್ಟೇ ಅಲ್ಲದೆ, ಜೀನ್ಸ್ ಉದ್ಯಮವನ್ನೂ ಕತ್ತಲೆಯ ಕೂಪಕ್ಕೆ ತಳ್ಳಿದೆ. ಈ ಕುರಿತು ಕಾಂಗ್ರೆಸ್ ಸರಕಾರ ಹಾಗೂ ರಾಹುಲ್ ಗಾಂಧಿಯ ಕಾಲೆಳೆದಿರುವ ಬಿಜೆಪಿ, ಹಿಂದೆ ರಾಗಾ ಕೊಟ್ಟ ಭರವಸೆಯ ಸತ್ಯಾಸತ್ಯತೆ ಎಷ್ಟಿದೆ ಎಂಬುದನ್ನು ರಾಜ್ಯದ ಜನತೆಯ ಮುಂದಿಟ್ಟಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ..ʻಕುಟುಂಬ ರಾಜಕಾರಣದ ಯುವರಾಜ ರಾಹುಲ್ ಗಾಂಧಿ ಪುಂಗಿ ಪುರುಷೋತ್ತಮ ಎಂಬ ಸತ್ಯವನ್ನು ಸ್ವತಃ ಸಿದ್ದರಾಮಯ್ಯ ಸರ್ಕಾರವೇ ಸಾಬೀತು ಮಾಡಿದೆʼ ಎಂದು ಟಕ್ಕರ್ ಕೊಟ್ಟಿದೆ.
“ಬಳ್ಳಾರಿಯನ್ನು ಜೀನ್ಸ್ ಕ್ಯಾಪಿಟಲ್ ಮಾಡುತ್ತೇನೆ, ಇದಕ್ಕಾಗಿ ₹5,000 ಕೋಟಿ ನೀಡುತ್ತೇವೆ, ಇದು ನನ್ನ ಪರ್ಸನಲ್ ಗ್ಯಾರಂಟಿ” ಎಂದು ತೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಪುಂಗಿ ಊದಿದ್ದರು. ಹೇಳಿದ್ದು ಕೊಡುವುದು ಬಿಡಿ, ಈಗ ಕೈಗಾರಿಕೆ ನಡೆಸಲು ಅಗತ್ಯವಾದ ವಿದ್ಯುತ್ ಕೂಡ ಕೊಡಲಾಗದೆ ರಾಜ್ಯ ಕಾಂಗ್ರೆಸ್ ಸರಕಾರ ಕೈ ಎತ್ತಿದೆ. ಅನಿಯಮಿತ ಲೋಡ್ ಶೆಡ್ಡಿಂಗ್ನಿಂದ ಜೀನ್ಸ್ ಬಟ್ಟೆ ಉದ್ಯಮವನ್ನೇ ಮೂರಾಬಟ್ಟೆ ಮಾಡಿರುವ ಕಾಂಗ್ರೆಸ್ ಸರ್ಕಾರ 80 ಸಾವಿರಕ್ಕೂ ಅಧಿಕ ಕುಟುಂಬಗಳನ್ನು ಬೀದಿಗೆ ತಂದಿದೆ ಎಂದು ಟೀಕಿಸಿದೆ.
ಸಂಸದ ಮತ್ತು ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಕೂಡ ಈ ವಿಚಾರದ ಬಗ್ಗೆ ಪೋಸ್ಟ್ ಮಾಡಿದ್ದು, ʻ6 ತಿಂಗಳ ಹಿಂದೆ ರಾಹುಲ್ ಗಾಂಧಿ ಬಳ್ಳಾರಿಯನ್ನು ದೇಶದ ಜೀನ್ಸ್ ರಾಜಧಾನಿ ಮಾಡುವುದಾಗಿ ಭರವಸೆ ನೀಡಿದ್ದರು. ಇಂದು ಸಿಎಂ ಸಿದ್ದರಾಮಯ್ಯ
ಈಗಾಗಲೇ ಅಸ್ತಿತ್ವದಲ್ಲಿರುವ ಉದ್ಯಮವನ್ನು ವಿದ್ಯುತ್ ಕಡಿತದ ಮೂಲಕ ಮತ್ತಷ್ಟು ದುರ್ಬಲಗೊಳಿಸುವ ಕೆಲಸವನ್ನು ಮಾಡುತ್ತಿದೆʼ ಎಂದು ಹರಿಹಾಯ್ದರು.
ಕುಟುಂಬ ರಾಜಕಾರಣದ ಯುವರಾಜ @RahulGandhi ಅವರು ಪುಂಗಿ ಪುರುಷೋತ್ತಮ ಎಂಬ ಸತ್ಯವನ್ನು ಸ್ವತಃ @siddaramaiah ಅವರ ಸರ್ಕಾರವೇ ಸಾಬೀತು ಮಾಡಿದೆ.
"ಬಳ್ಳಾರಿಯನ್ನು ಜೀನ್ಸ್ ಕ್ಯಾಪಿಟಲ್ ಮಾಡುತ್ತೇನೆ, ಇದಕ್ಕಾಗಿ ₹5,000 ಕೋಟಿ ನೀಡುತ್ತೇವೆ, ಇದು ನನ್ನ ಪರ್ಸನಲ್ ಗ್ಯಾರಂಟಿ" ಎಂದು ತೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಪುಂಗಿ ಊದಿದ್ದರು.… pic.twitter.com/igCsvjWF8K
— BJP Karnataka (@BJP4Karnataka) October 25, 2023
ಇತ್ತ ಲೋಡ್ ಶೆಡ್ಡಿಂಗ್ನಿಂದಾಗಿ ದಿನಕ್ಕೆ 500 ಪೀಸ್ ಉತ್ಪಾದನೆಯಾಗುವ ಜಾಗದಲ್ಲಿ ಕೇವಲ ನೂರು ಪೀಸ್ ಕೂಡ ತಯಾರು ಮಾಡುವುದಕ್ಕಾಗುತ್ತಿಲ್ಲ, ಹೀಗಾದರೆ ನಮ್ಮ ಮುಂದಿನ ಪಾಡೇನು? ಎಂದು ಜೀನ್ಸ್ ಉದ್ಯಮಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.