June 3, 2026
Wednesday, June 3, 2026
spot_img

ಆದಿವಾಸಿಗಳೇ ದೇಶದ ನಿಜವಾದ ಮಾಲೀಕರು : ಸಮಾವೇಶದಲ್ಲಿ ಸಾಂಪ್ರದಾಯಿಕ ಶಿರಸ್ತ್ರಾಣ ಧರಿಸಿ ರಾಹುಲ್ ಭರವಸೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದೆಹಲಿಯ ಇಂದಿರಾ ಭವನದಲ್ಲಿ ನಡೆದ ‘ಆದಿವಾಸಿ ಪ್ರೊಫೆಷನಲ್ಸ್ ಕಾನ್‌ಕ್ಲೇವ್ 2026’ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಿಜೆಪಿ ಮತ್ತು ಆರ್‌ಎಸ್‌ಎಸ್ ಆದಿವಾಸಿಗಳ ವಿರೋಧಿ ಮನಸ್ಥಿತಿ ಹೊಂದಿವೆ ಎಂದು ಆರೋಪಿಸಿದ್ದಾರೆ.

ಆದಿವಾಸಿ ಕಾಂಗ್ರೆಸ್ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಬುಡಕಟ್ಟು ಸಮುದಾಯಗಳನ್ನು ‘ವನವಾಸಿ’ ಎಂದು ಕರೆಯುವ ಮೂಲಕ ಅವರ ನೀರು, ಕಾಡು ಮತ್ತು ಭೂಮಿ ಹಕ್ಕುಗಳನ್ನು ಕಸಿದುಕೊಳ್ಳಲು ಬಿಜೆಪಿ ಮತ್ತು ಆರ್‌ಎಸ್‌ಎಸ್ ಯತ್ನಿಸುತ್ತಿದೆ ಎಂದು ದೂರಿದ್ದಾರೆ.

ಆದಿವಾಸಿಗಳೇ ದೇಶದ ಮೂಲ ಮಾಲೀಕರು:
“ಆದಿವಾಸಿಗಳು ಭಾರತದ ಮೂಲ ರಕ್ಷಕರು. ಅವರಲ್ಲೇ ಭಾರತದ ಐತಿಹಾಸಿಕ ಪ್ರಜ್ಞೆ ಮತ್ತು ಬುದ್ಧಿವಂತಿಕೆ ಅಡಗಿದೆ. ಇದೇ ಪರಮ ಸತ್ಯ” ಎಂದು ರಾಹುಲ್ ಗಾಂಧಿ ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಹಕ್ಕುಗಳ ಕಿತ್ತುಕೊಳ್ಳುವ ಸಂಚು:
ಬುಡಕಟ್ಟು ಜನರನ್ನು ‘ವನವಾಸಿ’ ಎಂದು ಬಿಂಬಿಸುವ ಮೂಲಕ ಅವರ ಮೂಲಭೂತ ಹಕ್ಕುಗಳಾದ ನೀರು, ಅರಣ್ಯ ಮತ್ತು ಭೂಮಿಯ ಮೇಲಿನ ಮಾಲೀಕತ್ವವನ್ನು ಕಿತ್ತುಕೊಳ್ಳುವ ಆದಿವಾಸಿ ವಿರೋಧಿ ಮನಸ್ಥಿತಿಯನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್ ಹೊಂದಿವೆ ಎಂದು ಅವರು ಗುಡುಗಿದ್ದಾರೆ.

ಸಾಂಪ್ರದಾಯಿಕ ಗೌರವ:
ಇನ್ನು ಈ ಸಂಧರ್ಭದಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಆದಿವಾಸಿ ಕಾಂಗ್ರೆಸ್ ಅಧ್ಯಕ್ಷ ವಿಕ್ರಾಂತ್ ಭುರಿಯಾ ಸಾಂಪ್ರದಾಯಿಕ ಆದಿವಾಸಿ ಪೆಟಾ ಧರಿಸಿ ಗೌರವಿಸಿದರು.

ಕಾಂಗ್ರೆಸ್ ಬೆಂಬಲದ ಭರವಸೆ:
ಇದೇ ವೇಳೆ ಕಾಂಗ್ರೆಸ್ ಪಕ್ಷ ಮತ್ತು ನಾನು ನಿಮ್ಮ ಹಕ್ಕುಗಳನ್ನು ಗೌರವಿಸುತ್ತೇವೆ. ನಿಮ್ಮ ಹಕ್ಕುಗಳ ರಕ್ಷಣೆಗಾಗಿ ಯಾವುದೇ ಹೆಜ್ಜೆ ಇಡಲು ಮತ್ತು ಯಾವುದೇ ಹೋರಾಟ ನಡೆಸಲು ನಾವು ಸದಾ ಸಿದ್ಧರಿದ್ದೇವೆ ಎಂದು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !