October 18, 2026
Sunday, October 18, 2026
spot_img

ಗುತ್ತಿಗೆದಾರನಿಂದ 5 ಲಕ್ಷ ಲಂಚ ಪಡೆಯುತ್ತಿದ್ದ ಪ್ರವಾಸೋದ್ಯಮ ಇಲಾಖೆ ಜೆಡಿ ತಿಪ್ಪೇಸ್ವಾಮಿ ಲೋಕಾ ಬಲೆಗೆ

​ಹೊಸದಿಗಂತ ವರದಿ ವಿಜಯನಗರ:

ವಿಶ್ವವಿಖ್ಯಾತ ಹಂಪಿಯ ಪ್ರವಾಸಿ ತಾಣಗಳ ಸಾಕ್ಷ್ಯಚಿತ್ರ ತಯಾರಿಕೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿ ಬಿಲ್ ಪಾವತಿಸಲು ಲಂಚ ಪಡೆಯುತ್ತಿದ್ದ ಪ್ರವಾಸೋದ್ಯಮ ಇಲಾಖೆಯ ಕಲ್ಬುರ್ಗಿ ಜಂಟಿ ನಿರ್ದೇಶಕ ತಿಪ್ಪೇಸ್ವಾಮಿ‌ ಅವರನ್ನು ಲೋಕಾಯುಕ್ತ ಪೊಲೀಸರು ಶುಕ್ರವಾರ ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.

ಚಿಕ್ಕಬಳ್ಳಾಪುರದ ಗುತ್ತಿಗೆದಾರ ಎನ್. ಲಕ್ಷ್ಮೀಪತಿ ಎಂಬುವರರು 2024-25ನೇ ಸಾಲಿನಲ್ಲಿ ಹಂಪಿಯಲ್ಲಿ ಸಾಕ್ಷ್ಯಚಿತ್ರ, ಕ್ಯೂಆರ್ ಕೋಡ್ ಮತ್ತು ಡೈರೆಕ್ಷನ್ ಬೋರ್ಡ್‌ಗಳನ್ನು ಅಳವಡಿಸಿದ್ದರು.
ಈ ಕಾಮಗಾರಿಗೆ ಸಂಬಂದಿಸಿ ಇಲಾಖೆಯಿಂದ 18.37 ಲಕ್ಷ ರೂ. ಮೊತ್ತದ ಬಿಲ್ ಬಿಡುಗಡೆಗಾಗಿ ತಿಪ್ಪೇಸ್ವಾಮಿ ಕಳೆದ 8- 10 ತಿಂಗಳಿನಿಂದ ಲಂಚಕ್ಕಾಗಿ ಪೀಡಿಸುತ್ತಿದ್ದರು.

ಈ ಕುರಿತು ಗುತ್ತಿಗೆದಾರ ನೀಡಿದ ದೂರಿನ ಮೇರೆಗೆ ಹೊಸಪೇಟೆ ಲೋಕಾಯುಕ್ತ ಠಾಣೆಯಲ್ಲಿ ದೂರು ದಾಖಲಾಗಿತ್ತು. ಶುಕ್ರವಾರ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಅಗ್ನಿಶಾಮಕ ದಳ ಕಚೇರಿ ಬಳಿ ಗುತ್ತಿಗೆದಾರರಿಂದ 5 ಲಕ್ಷ ರೂ. ನಗದು ಸ್ವೀಕರಿಸುತ್ತಿದ್ದಾಗ ಹೊಸಪೇಟೆ ಲೋಕಾಯುಕ್ತ ಡಿವೈಎಸ್ಪಿ ಸಚಿನ್ ಎಸ್. ಚಲವಾದಿ ನೇತೃತ್ವದ ತಂಡ ದಾಳಿ ನಡೆಸಿ, ತಿಪ್ಪೇಸ್ವಾಮಿಯನ್ನು ಬಂಧಿಸಿದ್ದಾರೆ.

Must Read