ರಾಹುಲ್ ಗಾಂಧಿ ಇಂದು ಗುಜರಾತ್​ಗೆ ಪ್ರವಾಸ, ಮೋರ್ಬಿ ದುರಂತ ಸಂತ್ರಸ್ತರ ಭೇಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ ಇಂದು ಗುಜರಾತ್​ನ ಅಹಮದಾಬಾದ್‌ಗೆ ಭೇಟಿ ನೀಡಲಿದ್ದಾರೆ. ಅಲ್ಲಿ ಅವರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದು, ಗುಜರಾತ್‌ನಲ್ಲಿ ಇತ್ತೀಚಿನ ದುರಂತಗಳಿಂದ ಸಂತ್ರಸ್ತರ ಕುಟುಂಬಗಳನ್ನು ಭೇಟಿ ಮಾಡಲಿದ್ದಾರೆ.

ಗುಜರಾತ್​​ ಪ್ರವಾಸದ ಸಮಯದಲ್ಲಿ ರಾಹುಲ್ ಗಾಂಧಿ ರಾಜ್‌ಕೋಟ್ ಗೇಮ್ ಝೋನ್ ಬೆಂಕಿ ದುರಂತ, ವಡೋದರಾದ ದೋಣಿ ಮುಳುಗುವಿಕೆ ಮತ್ತು ಮೋರ್ಬಿ ಸೇತುವೆ ಕುಸಿತ ಸೇರಿದಂತೆ ವಿವಿಧ ಘಟನೆಗಳಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಸಂತಾಪ ಸೂಚಿಸಲಿದ್ದಾರೆ.

ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಶಕ್ತಿಸಿನ್ಹ್ ಗೋಹಿಲ್ ಅವರು ರಾಹುಲ್ ಗಾಂಧಿಯ ಪ್ರವಾಸವನ್ನು ದೃಢಪಡಿಸಿದ್ದಾರೆ. “ರಾಹುಲ್ ಗಾಂಧಿಯವರು ಶನಿವಾರ ಮಧ್ಯಾಹ್ನ 12.30ರ ಸುಮಾರಿಗೆ ಜಿಪಿಸಿಸಿ ಕಚೇರಿಗೆ ಆಗಮಿಸುತ್ತಾರೆ. ಅವರು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮತ್ತು ರಾಜ್​ಕೋಟ್ ಗೇಮ್ ಝೋನ್ ಬೆಂಕಿ ಮತ್ತು ಇತರ ದುರಂತಗಳಲ್ಲಿ ಸಾವನ್ನಪ್ಪಿದ ಸಂತ್ರಸ್ತರ ಸಂಬಂಧಿಕರನ್ನು ಭೇಟಿ ಮಾಡುತ್ತಾರೆ” ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!