‘ರಾಹುಲ್ ಜೀ… ನೀವು ವೈಟ್​ ಚಾಲೆಂಜ್​​ಗೆ ಸಿದ್ಧರಿದ್ದೀರಾ?: ತೆಲಂಗಾಣದಲ್ಲಿ ರಾರಾಜಿಸುತ್ತಿದೆ ಬ್ಯಾನರ್​!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಾಂಗ್ರೆಸ್ ಮುಖಂಡ ರಾಹುಲ್​ ಗಾಂಧಿ ತೆಲಂಗಾಣದ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ ಎಂಬ ಎಲ್ಲೆಡೆ ಹರಿದಾಡುತ್ತಿದ್ದು, ಆದರೆ, ಇದಕ್ಕೆ ಉಸ್ಮಾನಿಯಾ ವಿವಿ ಹಾಗೂ ತೆಲಂಗಾಣ ಹೈಕೋರ್ಟ್​ ಅನುಮತಿ ನೀಡಿಲ್ಲ. ಆದರೆ ಇದರ ಬೆನ್ನಲ್ಲೇ ರಾಹುಲ್​ ಗಾಂಧಿ ವಿರೋಧಿಸುವ ಕೆಲವೊಂದು ಬ್ಯಾನರ್​ಗಳು ತೆಲಂಗಾಣದ ನಗರದಲ್ಲಿ ರಾರಾಜಿಸುತ್ತಿದೆ.

ಕೆಲವು ದಿನಗಳ ಹಿಂದೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇಪಾಳದಲ್ಲಿ ನಡೆದ ನೈಟ್‌ ಪಾರ್ಟಿಯಲ್ಲಿ ಎಂಜಾಯ್‌ ಮಾಡುತ್ತಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಇದೀಗ ಇದೇ ವಿಚಾರವನ್ನಿಟ್ಟುಕೊಂಡು ರಾಹುಲ್ ಗಾಂಧಿ ಕಾಲೆಳೆಯಲಾಗಿದ್ದು, ‘ರಾಹುಲ್ ಜೀ… ನೀವು ವೈಟ್​ ಚಾಲೆಂಜ್​​ಗೆ ಸಿದ್ಧರಿದ್ದೀರಾ? ಎಂದು ಪ್ರಶ್ನೆ ಮಾಡ್ತಿರುವ ಕೆಲವೊಂದು ಬ್ಯಾನರ್​ ನಗರದ ವಿವಿಧ ಸ್ಥಳಗಳಲ್ಲಿ ತಲೆ ಎತ್ತಿದೆ.

ರಾಹುಲ್​ ಗಾಂಧಿ ತೆಲಂಗಾಣಕ್ಕೆ ಆಗಮಿಸುತ್ತಾರೆ ಎಂಬ ಸುದ್ದಿ ಎಲ್ಲೆಡೆ ತಿಳಿಯುತ್ತಿದ್ದಂತೆ ಈ ಈ ಫ್ಲೆಕ್ಸ್​​ಗಳು ಎಲ್ಲೆಡೆ ಕಾಣಸಿಗುತ್ತಿದೆ.

ವೈಟ್​ ಚಾಲೆಂಜ್​ ಅಂದರೆ ಏನು?:

ಈ ಹಿಂದೆ ತೆಲಂಗಾಣದಲ್ಲಿ ಟಾಲಿವುಡ್​ ಡ್ರಗ್ಸ್​ ಪ್ರಕರಣದ ಸಂದರ್ಭದಲ್ಲಿ ವೈಟ್​ ಚಾಲೆಂಜ್​ ಸಿಕ್ಕಾಪಟ್ಟೆ ಮುನ್ನೆಲೆಗೆ ಬಂದಿತ್ತು. ಈ ವೇಳೆ, ಕಾಂಗ್ರೆಸ್​ ಹಾಗೂ ಟಿಆರ್​ಎಸ್​ ಪಕ್ಷಗಳ ಮುಖಂಡರು ಪರಸ್ಪರ ಸವಾಲು ಹಾಕಿದ್ದರು. ಡ್ರಗ್ಸ್​ ಪ್ರಕರಣದಿಂದ ಹಲವಾರು ಆರೋಪಿಗಳ ರಕ್ಷಣೆ ಮಾಡಲು ಟಿಆರ್​ಎಸ್​ ನಾಯಕರು ಪ್ರಯತ್ನಿಸುತ್ತಿದ್ದಾರೆಂದು ತೆಲಂಗಾಣ ಕಾಂಗ್ರೆಸ್​​ ಅಧ್ಯಕ್ಷ ರೇವಂತ್​ ರೆಡ್ಡಿ ಆರೋಪ ಮಾಡಿದ್ದರು. ಇದರ ಬೆನ್ನಲ್ಲೇ ನೀವು ತಪ್ಪು ಮಾಡಿಲ್ಲ ಎಂದರೆ ನಾರ್ಕೊಟಿಕ್​ ಟೆಸ್ಟ್ ಮಾಡಿಸಿಕೊಳ್ಳುವಂತೆ ಸವಾಲು ಹಾಕಿದ್ದರು.
ಸಚಿವ ಕೆಟಿಆರ್​ ಹಾಗೂ ಮಾಜಿ ಸಂಸದ ಕೊಂಡ ವಿಶ್ವೇಶ್ವರ್ ರೆಡ್ಡಿಗೆ ರೇವಂತ್ ರೆಡ್ಡಿ ಚಾಲೆಂಜ್​ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಕೆಟಿಆರ್, ತಾವು ಯಾವುದೇ ಪರೀಕ್ಷೆಗೆ ಸಿದ್ಧ, ದೆಹಲಿ ಏಮ್ಸ್​ಗೆ ಬರುತ್ತೇನೆ. ಆದರೆ, ಈ ಸವಾಲಿನಲ್ಲಿ ರಾಹುಲ್ ಗಾಂಧಿ ಭಾಗಿಯಾಗಬೇಕೆಂದು ತಿರುಗೇಟು ನೀಡಿದ್ದರು. ಈ ಸಂದರ್ಭದಲ್ಲಿ ವೈಟ್ ಚಾಲೆಂಜ್​ ಎಂಬ ಪದ ಬಳಿಕೆ ಮಾಡಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!