ವಿಶ್ವ ಟೆಸ್ಟ್ ಚಾಂಪಿಯನ್​​ಶಿಪ್​​ನಿಂದಲೂ ರಾಹುಲ್ ಔಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇಂಜುರಿಗೊಂಡು ಐಪಿಎಲ್​​ನಿಂದ ಹೊರಬಿದ್ದಿದ್ದ ರಾಹುಲ್ ಇದೀಗ ಮುಂದಿನ ತಿಂಗಳು ನಡೆಯಲ್ಲಿರುವ ವಿಶ್ವ ಟೆಸ್ಟ್ ಚಾಂಪಿಯನ್​​ಶಿಪ್​​ನಿಂದಲೂ ಹೊರಬಿದ್ದಿದ್ದಾರೆ.

ಸ್ವತಃ ಈ ವಿಚಾರವನ್ನು ರಾಹುಲ್ ಅವರೇ ಬಹಿರಂಗಪಡಿಸಿದ್ದು, ತಮ್ಮ ಇನ್​​ಸ್ಟಾಗ್ರಾಂ ಖಾತೆಯಲ್ಲಿ ಸುದೀರ್ಘ ಬರವಣೆಗೆಯ ಮೂಲಕ ಎಲ್ಲ ವದಂತಿಗೂ ತೆರೆ ಎಳೆದಿದ್ದಾರೆ.

ಈ ಬಗ್ಗೆ ಇನ್ಸ್​ಟಾಗ್ರಾಂನಲ್ಲಿ ಬರೆದುಕೊಂಡಿರುವ ರಾಹುಲ್, ನಾನು ಟೀಂ ಇಂಡಿಯಾದೊಂದಿಗೆ ಮುಂದಿನ ತಿಂಗಳು ಓವಲ್‌ನಲ್ಲಿ ಇರುವುದಿಲ್ಲ. ನನ್ನ ದೇಶಕ್ಕೆ ಸಹಾಯ ಮಾಡಲು ನಾನು ಎಲ್ಲವನ್ನೂ ಮಾಡುತ್ತೇನೆ. ಅದು ಯಾವಾಗಲೂ ನನ್ನ ಗಮನ ಮತ್ತು ಆದ್ಯತೆಯಾಗಿದೆ ಎಂದು ಬರೆದುಕೊಂಡಿದ್ದಾರೆ.

ಮುಂದಿನ ತಿಂಗಳು ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ರಾಹುಲ್ ಭಾರತ ತಂಡದ ಭಾಗವಾಗಿದ್ದರು. ಆದರೆ ಇದೀಗ ಅವರ ಅಲಭ್ಯತೆ ಬಿಸಿಸಿಐಗೆ ಹೊಸ ತಲೆನೋವು ತಂದಿದ್ದು, ಮುಂಬರುವ ದಿನಗಳಲ್ಲಿ ರಾಹುಲ್ ಬದಲಿ ಆಟಗಾರನನ್ನು ಹೆಸರಿಸುವ ನಿರೀಕ್ಷೆಯಿದೆ.

ಮೇ 1 ರಂದು (ಸೋಮವಾರ) ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದ ರಾಹುಲ್ ಇದೀಗ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಅವರ ಅನುಪಸ್ಥಿತಿಯಲ್ಲಿ, ಕೃನಾಲ್ ಪಾಂಡ್ಯ ಲಕ್ನೋ ತಂಡದ ನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!