ಹೊಸದಿಗಂತ ಡಿಜಿಟಲ್ ಡೆಸ್ಕ್ :
ಭಾರತ್ ಜೋಡೋ ಯಾತ್ರೆ (Bharat Jodo Yatra) ಇಂದು ಅಂತ್ಯವಾಗಿದ್ದು, ಈ ವೇಳೆ ಕಾಂಗ್ರೆಸ್ (Congress) ಮುಖಂಡ ರಾಹುಲ್ ಗಾಂಧಿ ಅವರು ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ಜತೆಗೆ ಸ್ನೋಬಾಲ್ ಫೈಟ್ ಮಾಡಿದ ಫೋಟೋ ವೈರಲ್ ಆಗಿದೆ.
Laughter, snow fight, and frosty treats #BharatJodoYatra pic.twitter.com/aoF7RdeO9S
— Bharat Jodo (@bharatjodo) January 30, 2023
ರಾಹುಲ್ ಹಾಗೂ ಪ್ರಿಯಾಂಕಾ ಮಕ್ಕಳಂತೆ ಆಟ ಆಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಫೋಟೋವನ್ನು ಭಾರತ್ ಜೋಡೋ ಯಾತ್ರೆಯ ಅಧಿಕೃತ ಖಾತೆಯಿಂದ ಶೇರ್ ಮಾಡಿಕೊಳ್ಳಲಾಗಿದೆ.
ಇಬ್ಬರೂ ತಮಾಷೆಗಾಗಿ ಸ್ನೋಬಾಲ್‍ನಲ್ಲಿ ಫೈಟ್ ಮಾಡಿದ್ದಾರೆ. ಜೊತೆಗೆ ಇಬ್ಬರು ಪರಸ್ಪರ ಸ್ನೋ ಬಾಲ್ ಎಸೆದುಕೊಂಡಿದ್ದಾರೆ. ಈ ವೇಳೆ ರಾಹುಲ್ ಗಾಂಧಿ ಅವರು ಪ್ರಿಯಾಂಕಾ ಗಾಂಧಿ ತಲೆಯ ಮೇಲೆ ಮುಷ್ಟಿ ಹಿಮದ ಮಳೆಗೈದಿದ್ದಾರೆ.