ರಾಹುಲ್ , ಸೂರ್ಯ ಸ್ಫೋಟಕ ಬ್ಯಾಟಿಂಗ್: ಬೃಹತ್‌ ಮೊತ್ತ ದಾಖಲಿಸಿದ ಟೀಮ್ ಇಂಡಿಯಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಟೀಮ್‌ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ 2ನೇ ಟಿ20 ಪಂದ್ಯದಲ್ಲಿ ಬೃಹತ್‌ ಮೊತ್ತ ದಾಖಲಿಸಿದೆ. ಕೆಎಲ್‌ ರಾಹುಲ್‌, ಸೂರ್ಯಕುಮಾರ್‌ ಯಾದವ್‌ ಸ್ಪೋಟಕ ಅರ್ಧಶತಕಗಳ ನೆರವಿನಿಂದ 3 ವಿಕೆಟ್‌ಗೆ 237 ರನ್‌ ಬಾರಿಸಿದೆ.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಟೀಮ್‌ ಇಂಡಿಯಾ ಆರಂಭದಿಂದಲೇ ಉತ್ತಮ ರನ್ ಕಲೆಹಾಕಿತು. ನಾಯಕ ರೋಹಿತ್ -ರಾಹುಲ್ ಜೊತೆಗೂಡಿ ತಂಡಕ್ಕೆ ಉತ್ತಮ ರನ್ ಕಾಣಿಕೆ ನೀಡಿದರು.

ಮೊದಲ ವಿಕೆಟ್‌ಗೆ ಈ ಜೋಡಿ 96 ರನ್‌ ಜೊತೆಯಾಟವಾಡುವ ಮೂಲಕಉತ್ತಮ ಆಟವಾಡಿದರು. ನಾಯಕ ರೋಹಿತ್‌ ಶರ್ಮ 37 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್‌ ಇದ್ದ 43 ರನ್‌ ಬಾರಿಸಿ ಮೊದಲಿಗರಾಗಿ ಔಟಾದರು. ಕೆಎಲ್‌ ರಾಹುಲ್‌ (57ರನ್‌, 28 ಎಸೆತ, 5 ಬೌಂಡರಿ, 4 ಸಿಕ್ಸರ್‌) ಗಳಿಸಿದರು.

ಬಳಿಕ ಬಂದ ಸೂರ್ಯಕುಮಾರ್‌ ಯಾದವ್‌ (61ರನ್‌, 22 ಎಸೆತ, 5 ಬೌಂಡರಿ, 5 ಸಿಕ್ಸರ್‌),ಹಾಗೂ ವಿರಾಟ್‌ ಕೊಹ್ಲಿ (49*ರನ್‌, 28 ಎಸೆತ, 7 ಬೌಂಡರಿ, 1 ಸಿಕ್ಸರ್) ಸ್ಪೋಟಕ ಆಟದಿಂದ ಟೀಮ್‌ ಇಂಡಿಯಾ ದೊಡ್ಡ ಮೊತ್ತ ದಾಖಲಿಸಿತು.

ವಿರಾಟ್‌ ಕೊಹ್ಲಿ ಹಾಗೂ ಸೂರ್ಯಕುಮಾರ್‌ ಯಾದವ್‌ ಜೋಡಿ ಪ್ರತಿ ಓವರ್‌ಗೆ 14.57ರಂತೆ ಕೇವಲ 42 ಎಸೆತಗಳಲ್ಲಿ 102 ರನ್‌ ಜೊತೆಯಾಟವಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!