ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೃಷಿ ಮತ್ತು ಜಲಸಂಪನ್ಮೂಲ ಅಭಿವೃದ್ಧಿಯಲ್ಲಿ ರಾಯಚೂರು ದೇಶದಲ್ಲೇ ಮೊದಲ ಸ್ಥಾನ ಪಡೆದಿದೆ.
2023 ಮಾರ್ಚ್ ತಿಂಗಳ ಕಾರ್ಯವೈಖರಿ ಆಧಾರದ ಮೇಲೆ ಮಹಾತ್ವಾಕಾಂಕ್ಷೆ ಜಿಲ್ಲೆಗಳ ಕಾರ್ಯಕ್ರಮದ ಅನ್ವಯ ನೀತಿ ಆಯೋಗ ಈ ರ‍್ಯಾಂಕ್ ನೀಡುತ್ತದೆ.
ದೇಶದಲ್ಲಿರುವ 115 ಮಹಾತ್ವಾಕಾಂಕ್ಷೆ ಜಿಲ್ಲೆಗಳಲ್ಲಿ ರಾಯಚೂರು ಮೊದಲ ಸ್ಥಾನ ಪಡೆದಿದೆ. ಹೀಗಾಗಿ ರಾಯಚೂರಿಗೆ ಹೆಚ್ಚುವರಿ ಮೂರು ಕೋಟಿ ರೂಪಾಯಿ ಅನುದಾನ ನೀಡಲಾಗುತ್ತದೆ. ಕೃಷಿ ಕ್ಷೇತ್ರ ವಿಸ್ತರಣೆ, ಜಲ ಸಂರಕ್ಷಣೆ ವಿಧಾನಗಳು ಹಾಗೂ ನೀತಿ ಆಯೋಗದ ಮಾನದಂಡಗಳ ಅನ್ವಯ ರಾಯಚೂರಿಗೆ ಮೊದಲ ಸ್ಥಾನ ನೀಡಲಾಗಿದೆ.