ನಕಲಿ ಕ್ಲಿನಿಕ್‌ಗಳ ಮೇಲೆ ದಾಳಿ: ಆರೋಗ್ಯ ಇಲಾಖೆ ಬಲೆಗೆ ಬಿದ್ರು 109 ‘ವೈದ್ಯರು’!!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಲಬುರಗಿಯಲ್ಲಿ ನಕಲಿ ಕ್ಲಿನಿಕ್‌ಗಳ ಮೇಲೆ ಆರೋಗ್ಯ ಇಲಾಖೆ ದಾಳಿ, 109 ನಕಲಿ ವೈದ್ಯರು ಪತ್ತೆಯಾಗಿದ್ದಾರೆ. ಹಳ್ಳಿ ಹಳ್ಳಿಗೂ ಆರೋಗ್ಯ ಇಲಾಖೆ ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸಿದ್ದು, 43 ಕ್ಲಿನಿಕ್‌ಗಳನ್ನು ಬಂದ್ ಮಾಡಲಾಗಿದೆ.

ರಾಜ್ಯದಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳು ಪರಿಶೀಲನೆ ಮಾಡಿದ್ದು, ಬರೋಬ್ಬರಿ 109 ನಕಲಿ ವೈದ್ಯರು ಒಂದೇ ಜಿಲ್ಲೆಯಲ್ಲಿ ಪತ್ತೆಯಾಗಿದ್ದಾರೆ.

ಎಮ್‌ಬಿಬಿಎಸ್ ಮಾಡದೇ ಕೆಪಿಎಂಇ (Karnataka private medical establishments) ಲೈಸೆನ್ಸ್ ಇಲ್ಲದೆ ಕ್ಲಿನಿಕ್‌ಗಳನ್ನ ಓಪನ್ ಮಾಡಲಾಗಿದೆ. ರಾಜಾರೋಷವಾಗಿ ಸಿಕ್ಕ ಸಿಕ್ಕ ಔಷಧ ನೀಡುತ್ತಾ ಜನರ ಜೀವನದ ಜೊತೆ ಆಟವಾಡುವ ನಕಲಿ ವೈದ್ಯರನ್ನು ವಶಕ್ಕೆ ಪಡೆಯಲಾಗಿದೆ. ಕೆಪಿಎಂಇ ಲೈಸೆನ್ಸ್ ಇಲ್ಲದ ಕ್ಲಿನಿಕ್‌ಗಳಿಗೆ ನೊಟೀಸ್ ಜಾರಿಮಾಡಲಾಗಿದೆ. ನೊಟೀಸ್ ನೀಡಿದ ಮೇಲೂ ಅನುಮತಿ ಇಲ್ಲದೆ ಕ್ಲಿನಿಕ್ ತೆರೆದರೆ ಕ್ರಿಮಿನಲ್ ಕೇಸ್ ದಾಖಲಾಗಲಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!