ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ಮಧ್ಯರಾತ್ರಿಯಿಂದ ನಸುಕಿನ ಜಾವದವರೆಗೆ ಆರ್ಭಟಿಸಿದ್ದ ವರುಣರಾಯಣ ಈಗ ಕೊಂಚ ಶಾಂತವಾಗಿದ್ದಾನೆ.
ಆದರೆ ವರುಣನ ಆರ್ಭಟದ ಎಫೆಕ್ಟ್‌ನಿಂದಾಗಿ ಸಿಲಿಕಾನ್ ಸಿಟಿ ಮಂದಿ ಹೈರಾಣಾಗಿದ್ದಾರೆ. ನಸುಕಿನಜಾವ ಸುರಿದ ಭಾರಿ ಮಳೆಗೆ ನಗರದ ರಸ್ತೆಗಳಲ್ಲಿ ಮೊಣಕಾಲಿನವರೆಗೂ ನೀರು ನಿಂತಿದೆ. ಇದರಿಂದ ಕಚೇರಿಗಳಿಗೆ ತೆರಳುತ್ತಿದ್ದವರು ಪರದಾಡುವಂತಾಯಿತು.
ಬೈಕ್ ಮತ್ತು ಆಟೋ ಇಂಜಿನ್ಗಳಲ್ಲಿ ನೀರು ಹೊಕ್ಕು ನಡುರಸ್ತೆ ಬಂದ್ ಆಗಿ ನಿಂತಿವೆ. ಪ್ರೀಡಂ ಪಾರ್ಕ್ ರಸ್ತೆಯಲ್ಲಿ ಮಳೆ ನೀರು ನಿಂತು ಅವಾಂತರ ಸೃಷ್ಟಿಯಾಗಿದೆ. ವಾಹನ ಸವಾರರು ಪರದಾಡಿದರು. ಹೀಗಾಗಿ ವಾಹನ ಸಂಚಾರ ನಿಧಾನಗತಿಯಿಂದ ಕೂಡಿದೆ.