Wednesday, June 7, 2023

Latest Posts

ಬೆಂಗಳೂರಿನಲ್ಲಿ ಮಳೆ: ಆರ್‌ಸಿಬಿ- ಗುಜರಾತ್ ಟಾಸ್ ವಿಳಂಬ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಯಿಂದ ಪಂದ್ಯ ಆರಂಭ ಸಾಧ್ಯವಾಗಿಲ್ಲ. ಮಳೆ ಕಾರಣ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯದ ಟಾಸ್ ವಿಳಂಬವಾಗಿದೆ.

ಇದು ಬೆಂಗಳೂರು ತಂಡದ ಒತ್ತಡ ಹೆಚ್ಚಿಸಿದೆ. ಪ್ಲೇಆಫ್ ಸ್ಥಾನಕ್ಕೇರಲು ಈ ಪಂದ್ಯ ಅತ್ಯಂತ ಮುಖ್ಯವಾಗಿದೆ. ಕಾರಣ ಹೈದರಾಬಾದ್ ವಿರುದ್ದ ಮುಂಬೈ ಗೆಲುವಿನ ಹಾದಿಯಲ್ಲಿ ಸಾಗುತ್ತಿದೆ. ಹೀಗಾಗಿ ಆರ್‌ಸಿಬಿ ಈ ಪಂದ್ಯ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

ಬೆಂಗಳೂರಿನಲ್ಲಿ ಸುರಿದ ಮಳೆಗೆ ನಗರವೇ ಅಸ್ತವ್ಯಸ್ಥವಾಗಿದೆ. ಚಿನ್ನಸ್ವಾಮಿ ಸುತ್ತಮುತ್ತ ಸುರಿದ ಭಾರಿ ಮಳೆಯಿಂದ ಮೈದಾನ ಸಂಪೂರ್ಣ ನೀರು ತಂಬಿಕೊಂಡಿತ್ತು. ಆದರೆ ಅತ್ಯಾಧುನಿಕ ತಂತ್ರಜ್ಞಾನದ ಕಾರಣ ಬೆಂಗಳೂರು ಮೈದಾನ ಸಜ್ಜುಗೊಳಿಸವು ಕಾರ್ಯ ನಡೆಯುತ್ತಿದೆ. ಆದರೆ ತುಂತುರ ಮಳೆ ಆರಂಭವಾಗಿರುವ ಕಾರಣ ಪಂದ್ಯ ಆರಂಭ ವಿಳಂಭವಾಗುವ ಸಾಧ್ಯತೆ ಇದೆ.

ಪ್ಲೇ ಆಫ್ ಹೋರಾಟದಲ್ಲಿ ಇನ್ನುಳಿದಿರುವುದು ಒಂದು ಸ್ಥಾನ ಮಾತ್ರ. ಗುಜರಾತ್ ಟೈಟಾನ್ಸ್ ಮೊದಲ ತಂಡವಾಗಿ ಪ್ಲೇ ಆಫ್ ಸ್ಥಾನ ಖಚಿತಪಡಿಸಿಕೊಂಡಿದೆ. 18 ಅಂಕದೊಂದಿಗೆ ಮೊದಲ ಸ್ಥಾನದಲ್ಲಿದೆ. ಇನ್ನು ಚೆನ್ನೈ ಸೂಪರ್ ಕಿಂಗ್ಸ್ 17 ಅಂಕ ಪಡೆದು ಪ್ಲೇ ಆಫ್ ಸ್ಥಾನ ಖಚಿತಪಡಿಸಿದೆ. ಇತ್ತ ಲಖನೌ ಸೂಪರ್ ಜೈಂಟ್ಸ್ 17 ಅಂಕ ಪಡೆದು ಪ್ಲೇ ಆಫ್ ಸ್ಥಾನ ಖಚಿತಪಡಿಸಿದೆ. ಇನ್ನುಳಿದ ಒಂದು ಸ್ಥಾನಕ್ಕಾಗಿ ಮುಂಬೈ ಹಾಗೂ ಆರ್‌ಸಿಬಿ ನಡುವೆ ಪೈಪೋಟಿ ಇದೆ. ಮುಂಬೈ ಇಂಡಿಯನ್ಸ್, ಹೈದರಾಬಾದ್ ವಿರುದ್ಧ ಗೆಲುವು ಸಾಧಿಸಿದರೆ 16 ಅಂಕ ಸಂಪಾದಿಸಲಿದೆ. ಇತ್ತ ಆರ್‌ಸಿಬಿ 14 ಅಂಕ ಗಳಿಸಿದೆ. ಹೀಗಾಗಿ ಪ್ಲೇ ಆಫ್ ಪ್ರವೇಶಕ್ಕೆ ಇಂದಿನ ಪಂದ್ಯದ ಗೆಲುವು ಅನಿವಾರ್ಯವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!