ದಿಗಂತ ವರದಿ ಕಲಬುರಗಿ:
ಕಳೆದ ಎರಡು ದಿನಗಳಿಂದ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜಿಲ್ಲೆಯ ಸೇಡಂ ತಾಲೂಕಿನ ಐತಿಹಾಸಿಕ ಮಳಖೇಡ ಕೋಟೆಯ ಗೊಡೆಯೊಂದು ಶುಕ್ರವಾರ ಸಂಜೆ ಹೊತ್ತಿಗೆ ಕುಸಿದು ಬಿದ್ದ ಘಟನೆ ನಡೆದಿದೆ.
ಶುಕ್ರವಾರ ಬೆಳಗ್ಗೆಯಿಂದಲೆ ಸುರಿದ ಮಳೆಯಿಂದಾಗಿ ಕೋಟೆಯ ಒಳಭಾಗದಲ್ಲಿ ಮಳೆಯ ನೀರು ನಿಂತಿದ್ದು, ನಿರಂತರವಾಗಿ ಸುರಿದ ಮಳೆಯಿಂದ ಕೋಟೆಯ ಗೋಡೆಗಳು ತೇವಾಂಶವನ್ನು ಪಡೆದುಕೊಂಡು ಏಕಾಏಕಿ ಕೋಟೆಯ ಗೋಡೆಯೂ ಶುಕ್ರವಾರ ಸಂಜೆ ಹೊತ್ತಿನಲ್ಲಿ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾರಿಗೂ ಸಹ ಯಾವುದೇ ರೀತಿಯ ಪ್ರಾಣ ಹಾನಿಯಾಗಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.