ಕರಾವಳಿಯಲ್ಲಿ ಮಳೆ ಅಬ್ಬರ: ಗಿರಿಶಿಖರಗಳ ಚಾರಣಕ್ಕೆ ನಿಷೇಧ, ಮುಲ್ಲೈ ಮುಗಿಲನ್ ಆದೇಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ವಿವಿಧೆಡೆ ಭೂಕುಸಿತಗಳು ಹೆಚ್ಚಾಗಿವೆ. ಹಾಗಾಗಿ ಮತ್ತಷ್ಟು ಪ್ರಕೃತಿ ವಿಕೋಪಗಳು ಸಂಭವಿಸುವ ಭೀತಿಯಿಂದ ಈ ಪ್ರದೇಶದ ಬೆಟ್ಟ, ಶಿಖರಗಳಲ್ಲಿ ಪ್ರವಾಸಿಗರು ಸಂಚರಿಸದಂತೆ ನಿರ್ಬಂಧ ಹೇರಲಾಗಿದೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ನಿಷೇಧಾಜ್ಞೆ ಹೊರಡಿಸಿದ್ದಾರೆ. ಮಳೆಗಾಲ ಮುಗಿಯುವವರೆಗೆ ಖಾಸಗಿ ಮನೆಗಳು ಮತ್ತು ರೆಸಾರ್ಟ್‌ಗಳಲ್ಲಿ ತಂಗುವುದು ಸೇರಿದಂತೆ ಅರಣ್ಯ ಇಲಾಖೆ ಆಯೋಜಿಸುವ ಟ್ರೆಕ್ಕಿಂಗ್ ಮತ್ತು ಸಾಹಸ ಪ್ರವಾಸಗಳಿಗೆ ನಿಷೇಧವಿದೆ. ಇದರ ಜೊತೆಗೆ ನದಿಗಳು ಮತ್ತು ಸಮುದ್ರಗಳ ದಡಕ್ಕೆ ಹೋಗದಂತೆ ಜನರಿಗೆ ಸೂಚಿಸಲಾಗಿದೆ.

ಜಿಲ್ಲಾಧಿಕಾರಿಗಳ ಆದೇಶದ ಪ್ರಕಾರ, ಈಜು, ಮೀನುಗಾರಿಕೆ ಮುಂತಾದ ಚಟುವಟಿಕೆಗಳು ನದಿ ಮತ್ತು ಸಮುದ್ರದ ದಡದಲ್ಲಿ ನಿಷೇಧಿಸಲಾಗಿದೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!