ಮೇಕೆಗಳಿಗೆ ಫಳಫಳ ರೈನ್‌ಕೋಟ್: ಹೇಗಿದೆ ನೋಡಿ ತಂಜಾವೂರು ರೈತನ ಈ ಐಡಿಯಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಲ್ಲೊಬ್ಬ ರೈತ ಮಳೆಯಿಂದ ರಕ್ಷಣೆ ಸಿಗಲು ತನ್ನ ಮೇಕೆಗಳಿಗೆ ನೂತನ ಮಾದರಿಯ ‘ರೈನ್ ಕೋಟ್’ ಸಂಶೋಧಿಸಿದ್ದಾರೆ! ಎಸ್, ತಮಿಳುನಾಡಿನ ತಂಜಾವೂರು ಕುಲಮಂಗಲಂ ಗ್ರಾಮದ ಗಣೇಶನ್ ಎಂಬವರು ಈಗ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸಂಶೋಧನೆಗೆ ಭೇಷ್ ಭೇಷ್ ಅನ್ನಿಸಿಕೊಳ್ಳುತ್ತಿದ್ದಾರೆ.

ಈ ಭಾಗದಲ್ಲಿ ವಿಪರೀತ ಮಳೆಯಾಗುತ್ತಿದ್ದು, ತನ್ನ ಮೇಕೆಗಳು ಮಳೆಯಲ್ಲಿ ನೆನೆದು ಚಳಿಯಿಂದ ನಡುಗುತ್ತಿರುವುದನ್ನು ಗಮನಿಸಿದ ಈ ರೈತ, ತನ್ನ ಬಳಿಯಲ್ಲಿಯೇ ಇರುವ ಅಕ್ಕಿ ಚೀಲಗಳನ್ನು ಬಳಸಿ ರೈನ್‌ಕೋಟ್ ತಯಾರಿಸಿದ್ದಾರೆ. ಆರಂಭದಲ್ಲಿ ಗ್ರಾಮಸ್ಥರು ಗೇಲಿ ಮಾಡಿದರೂ, ಮೇಕೆಗಳಿಗೆ ಇದರಿಂದಾಗುತ್ತಿರುವ ಲಾಭ ಕಂಡು ಹುಬ್ಬೇರಿಸಿ ಶಹಬಾಸ್‌ಗಿರಿ ನೀಡಿದ್ದಾರೆ. ಅಂದಹಾಗೆ 70 ವರ್ಷದ ಈ ರೈತ ಅಪಾರ ಪ್ರಾಣಿ ಪ್ರಿಯರೂ ಆಗಿದ್ದಾರೆ. ಸದ್ಯ ಇವರಲ್ಲಿ ಮೇಕೆಗಳಲ್ಲದೆ ಹಸು ಹಾಗೂ ಕೋಳಿಗಳೂ ಇವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!