ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾದಾ ದೋಸೆ, ಈರುಳ್ಳಿ ದೋಸೆ, ಮಸಾಲೆದೋಸೆ, ಉಪ್ಮಾ ದೋಸೆ, ಪನ್ನೀರ್ ದೋಸೆ, ಹೀಗೆ ದೋಶದಲ್ಲಿ ನೂರಕ್ಕೂ ಹೆಚ್ಚು ಬಗೆಯ ದೋಸೆಗಳಿವೆ. ಹಸಿರು ದೋಸೆ ಮತ್ತು ಕೆಂಪು ದೋಸೆ ಎಂದು ಕರೆಯಲ್ಪಡುವ ಹಸಿರು ತರಕಾರಿಗಳು ಮತ್ತು ಬೀಟ್‌ರೂಟ್‌ನೊಂದಿಗೆ ಮಾಡಿದ ದೋಸೆಗಳಿಗೆ ಉತ್ತಮ ಬೇಡಿಕೆಯಿದೆ. ಆದರೆ ಇತ್ತೀಚಿಗೆ ನೀಲಿ ದೋಸೆಯೂ ಹೆಚ್ಚು ಪ್ರಚಲಿತದಲ್ಲಿದೆ.
ಪುಡ್ ವ್ಯಾಪಾರ ಯಾವಾಗಲೂ ಸ್ಪರ್ಧಾತ್ಮಕವಾಗಿರುತ್ತದೆ. ಸ್ಪರ್ಧೆಯಿಂದ ತಮ್ಮ ವ್ಯಾಪಾರವನ್ನು ಕಾಪಾಡಿಕೊಳ್ಳಲು ನಾನಾ ಕಸರತ್ತು ನಡೆಸಬೇಕು. ಅದರಂತೆ ರಾಯ್‌ಪುರದ ದೋಸಾವಾಲನೊಬ್ಬ ಈ ನೀಲಿ ದೋಸೆವನ್ನು ಚೀಸ್, ಟೊಮೆಟೊ ಸಾಸ್, ಸ್ವೀಟ್ ಕಾರ್ನ್ ಮತ್ತು ಇತರ ಪದಾರ್ಥಗಳೊಂದಿಗೆ ಸರ್ವ್ ಮಾಡುತ್ತಾರೆ. ಅದು ದೋಸೆ ತಿನ್ನುವವರೂ ಬ್ಲೂ ದೋಸೆ..ವ್ಹಾವ್ ಟೇಸ್ಟಿ ಅಂತಿದಾರೆ. ಈ
ನೀಲಿ ದೋಸೆ @khate_raho_dilse Instagram ಖಾತೆಯಲ್ಲಿ ಪೋಸ್ಟ್ ಮಾಡಿದ್ದು ವೈರಲ್ ಆಗುತ್ತಿದೆ.