ರಾಜ್ ಬಿ. ಶೆಟ್ಟಿ ಜೊತೆಗಲ್ಲ, ಇವರ ಜೊತೆ ಸಿನಿಮಾ ಮಾಡ್ತಿದ್ದಾರೆ ರಮ್ಯಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಮ್ಯಾ ಕನ್ನಡ ಚಿತ್ರರಂಗದಿಂದ ದೊಡ್ಡ ಬ್ರೇಕ್ ಪಡೆದು ಇತ್ತೀಚೆಗಷ್ಟೇ ವಾಪಾಸ್ ಆಗಿದ್ದಾರೆ. ಇದೀಗ ಸಕ್ರಿಯವಾಗಿ ಎಲ್ಲೆಡೆ ಕಾಣಿಸಿಕೊಳ್ಳೋ ರಮ್ಯಾ ತಮ್ಮದೇ ಪ್ರೊಡಕ್ಷನ್ ಹೌಸ್ ಆರಂಭಿಸಿದ್ದಾರೆ.
ಇದರ ಮೂಲಕ ಮತ್ತೆ ಬಣ್ಣ ಹಚ್ಚೋಕೆ ರಮ್ಯಾ ನಿರ್ಧರಿಸಿದ್ದರು. ರಾಜ್ ಬಿ. ಶೆಟ್ಟಿ ನಿರ್ದೇಶನದ ಸ್ವಾತಿ ಮುತ್ತಿನ ಮಳೆ ಹನಿಯೇ ಮೂಲಕ ಕಂ ಬ್ಯಾಕ್ ಮಾಡೋಕೆ ನಿರ್ಧರಿಸಿದ್ದ ರಮ್ಯಾ ಮತ್ಯಾಕೋ ಹಿಂದೇಟು ಹಾಕಿದ್ದರು.

ಸ್ಟಾರ್ ಆಕ್ಟರ್ ಜೊತೆ ರಮ್ಯಾ ಕಂಬ್ಯಾಕ್ ಮಾಡುವವರಿದ್ದಾರೆ ಎಂದು ಹೇಳಲಾಗಿದೆ. ರಮ್ಯಾ ಇತ್ತೀಚೆಗೆ ಕೆಆರ್‌ಜಿ ಸ್ಟುಡಿಯೋ ಕಾರ್ಯಕ್ರಮದಲ್ಲಿ ಹೆಚ್ಚು ಕಾಣಿಸ್ತಿದ್ದಾರೆ. ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಜೊತೆ ಹೆಚ್ಚು ಕಾಣಿಸಿಕೊಳ್ಳುತ್ತಿದ್ದು, ಇವರೇ ನಿರ್ಮಿಸುತ್ತಿರುವ ಉತ್ತರಕಾಂಡ ಸಿನಿಮಾದಲ್ಲಿ ರಮ್ಯಾ ನಟಿಸುತ್ತಿದ್ದಾರೆ ಎನ್ನಲಾಗಿದೆ.

ಹೊಯ್ಸಳ' ಶೂಟಿಂಗ್‌ನಲ್ಲಿ ನಟಿ ರಮ್ಯಾ ಭಾಗಿ! | Actress Ramya Visited Dhananjay  Starrer Hoysala Movie Shooting Spot In Mysore - Kannada Filmibeatಡಾಲಿ ಧನಂಜಯ್ ಜೊತೆ ರಮ್ಯಾ ಸ್ಕ್ರೀನ್ ಶೇರ್ ಮಾಡಲಿದ್ದಾರೆ ಎನ್ನಲಾಗಿದೆ. ಡಾಲಿ ಸಿನಿಮಾಗಳಿಗೆ ರಮ್ಯ ಮೊದಲಿಂದಲೂ ಪ್ರೋತ್ಸಾಹ ನೀಡುತ್ತಿದ್ದರು. ಹೆಡ್‌ಬುಷ್ ಇವೆಂಟ್‌ಗೆ ದಾವಣಗೆರೆಗೆ ರಮ್ಯಾ ಬಂದಿದ್ದರು, ಇನ್ನು ಹೊಯ್ಸಳ ಸೆಟ್‌ನಲ್ಲಿಯೂ ರಮ್ಯಾ ಕಾಣಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!