ಹೊಸ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಿದ ರಾಜ್ ಬಿ ಶೆಟ್ಟಿ: ಹೆಸರೇನು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

‘ಗರುಡ ಗಮನ ವೃಷಭ ವಾಹನ’ ಸಿನಿಮಾ ಮೂಲಕ ಎಲ್ಲೆಡೆ ಪರಿಚಿತರಾದ ನಟ ಕಮ್ ನಿರ್ದೇಶಕ ರಾಜ್ ಬಿ ಶೆಟ್ಟಿ (Raj B Shetty) ಮುಂದಿನ ಚಿತ್ರದ ಬಗ್ಗೆ ಬಿಗ್ ಅಪ್‌ಡೇಟ್ ನೀಡಿದ್ದಾರೆ.

ತಾವು ಹೇಳಿದ ದಿನಾಂಕ ಮತ್ತು ಸಮಯಕ್ಕೆ ಹೊಸ ಸಿನಿಮಾದ ಅಪ್ ಡೇಟ್ ನೀಡಿದ್ದು, ಈ ಚಿತ್ರಕ್ಕೆ ‘ಟೋಬಿ’ (Toby) ಎಂದು ಹೆಸರಿಟಿದ್ದಾರೆ. ಅದರ ಜೊತೆಗೆ ಈ ಸಿನಿಮಾ ಇದೇ ಆಗಸ್ಟ್ 25 ರಂದು ರಿಲೀಸ್ ಮಾಡುವುದಾಗಿಯೂ ತಿಳಿಸಿದ್ದಾರೆ.

ಈ ಕುರಿತು ಪೋಸ್ಟ್ ಮಾಡಿರುವ ರಾಜ್ ಬಿ ಶೆಟ್ಟಿ, ‘ಮಾರಿ.. ಮಾರಿ.. ಮಾರಿಗೆ ದಾರಿ. ಟೋಬಿ.. ಆಗಸ್ಟ್ 25ರಂದು ನಿಮ್ಮ ಮುಂದೆ’ ಎಂದು ಬರೆದುಕೊಂಡಿದ್ದಾರೆ.

ನಟ- ನಿರ್ದೇಶಕ, ಬರಹಗಾರನಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡ ರಾಜ್ ಬಿ ಶೆಟ್ಟಿ ಬಹುಮುಖ ಪ್ರತಿಭೆ.‘ಒಂದು ಮೊಟ್ಟೆಯ ಕಥೆ’, ‘ಗರುಡ ಗಮನ ವೃಷಭ ವಾಹನ’ ಸಿನಿಮಾಗಳಿಗೆ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದಾರೆ.

ರಾಜ್ ಬಿ ಶೆಟ್ಟಿ ನೇತೃತ್ವದ Lighters Buddha Film ಅಡಿಯಲ್ಲಿ ವಚನ್ ಶೆಟ್ಟಿ, ರವಿ ರೈ ನಿರ್ಮಾಣ ಮಾಡಿದ್ದರು. ಇವರ ಜೊತೆ Agastya Films ಜಂಟಿಯಾಗಿ ಬರುತ್ತಿದ್ದಾರೆ. ಇವರಿಬ್ಬರ ಕಾಂಬೋದಲ್ಲಿ ಹೊಸ ಸಿನಿಮಾ ಮೂಡಿ ಬಂದಿದೆ.

ರಾಜ್ ಬಿ ಶೆಟ್ಟಿ ಅವರ ಕೈಯಲ್ಲಿ ಟೋಬಿ, ನಟಿ ರಮ್ಯಾ ನಿರ್ಮಾಣದ ‘ಸ್ವಾತಿ ಮುತ್ತಿನ ಮಳೆ ಹನಿಯೇ’, ರಾಮನ ಅವತಾರ, ಸೇರಿದಂತೆ ಹಲವು ಚಿತ್ರಗಳಿವೆ .

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!