ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡದ ಪ್ರತಿಭಾವಂತ ನಟ ಮತ್ತು ನಿರ್ದೇಶಕ ರಾಜ್ ಬಿ ಶೆಟ್ಟಿ ಕೇವಲ ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲದೇ ಮಲಯಾಳಂನಲ್ಲೂ ತಮ್ಮದೇ ಹವಾ ಕ್ರಿಯೇಟ್ ಮಾಡಿದ್ದಾರೆ.
ಈಗಾಗಲೇ ಸೂಪರ್ ಸ್ಟಾರ್ ಮಮ್ಮುಟಿ ನಟಿಸಿರುವ ‘ಟರ್ಬೊ’ ಸಿನಿಮಾನಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದರಾಜ್ ಬಿ ಶೆಟ್ಟಿ. ಇದೀಗ ಮತ್ತೊಂದು ಮಲಯಾಳಂ ಸಿನಿಮಾದಲ್ಲಿ ನಟಿಸಿದ್ದಾರೆ.
ರಾಜ್ ಬಿ ಶೆಟ್ಟಿ, ಮಲಯಾಳಂನ ‘ರುಧಿರಂ’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾದ ಪ್ರೋಮೋ ಇದೀಗ ಬಿಡುಗಡೆ ಆಗಿದ್ದು, ಕುತೂಹಲ ಹೆಚ್ಚಿಸುತ್ತಿದೆ.
ಟೀಸರ್ ನೋಡಿದವರಿಗೆ ‘ರುಧಿರಂ’ ಸಿನಿಮಾನಲ್ಲಿ ರಾಜ್ ಬಿ ಶೆಟ್ಟಿ ನಾಯಕನೊ? ಅಥವಾ ವಿಲನ್ ಪಾತ್ರವೋ ಎಂಬ ಅನುಮಾನ ಮೂಡುತ್ತಿದೆ. ಟೀಸರ್ನ ಆರಂಭದಲ್ಲಿ ಜೇನು ಸಾಕಣೆ ಮಾಡುವ ವ್ಯಕ್ತಿಯಾಗಿ ಕಾಣಿಸಿಕೊಳ್ಳುವ ರಾಜ್ ಬಿ ಶೆಟ್ಟಿ ಆ ನಂತರ ಅನುಮೂನ ಮೂಡುವ ಹಲವು ಶೇಡ್ಗಳಲ್ಲಿ ಕಾಣಿಸಿಕೊಳ್ಳುತ್ತಾರೆ.
ಸಿನಿಮಾದಲ್ಲಿ ಮಲಯಾಳಂನ ಖ್ಯಾತ ನಟಿ ಅಪರ್ಣಾ ಬಾಲಮುರಳಿ ಸಹ ಇದ್ದಾರೆ. ಅಪರ್ಣಾ ಬಾಲಮುರಳಿ ಹಾಗೂ ರಾಜ್ ಬಿ ಶೆಟ್ಟಿ ನಡುವೆ ನಡೆವ ದ್ವೇಷದ ಕತೆಯೇ ‘ರುಧಿರಂ’ ಸಿನಿಮಾ ಇರಬಹುದೆಂಬ ಅನುಮಾನ ಟೀಸರ್ನಿಂದ ಮೂಡುತ್ತದೆ. ಇಡೀ ಟೀಸರ್ನಲ್ಲಿ ರಾಜ್ ಬಿ ಶೆಟ್ಟಿ, ಅಪರ್ಣಾ ಮತ್ತು ಒಂದು ನಾಯಿ ಮಾತ್ರವೇ ಕಾಣಿಸಿಕೊಳ್ಳುತ್ತದೆ. ಟೀಸರ್ನಲ್ಲಿ ಅಲ್ಲಲ್ಲಿ ರಕ್ತ, ಕೆಲವು ಆಯುಧಗಳು, ಬಂದೂಕುಗಳು ಸಹ ಕಾಣಿಸಿಕೊಳ್ಳುತ್ತವೆ. ಇದೊಂದು ಪಕ್ಕಾ ಥ್ರಿಲ್ಲರ್ ಸಿನಿಮಾ ಎಂಬುದೇನೋ ಟೀಸರ್ನಿಂದ ಗೊತ್ತಾಗುತ್ತಿದೆ. ಆದರೆ ಯಾರು ಯಾರ ಹಿಂದೆ ಬಿದ್ದಿದ್ದಾರೆ ಎಂಬುದು ತಿಳಿಯುವುದಿಲ್ಲ. ಅದೆಲ್ಲ ತಿಳಿಯಲಯಲು ಸಿನಿಮಾ ನೋಡಬೇಕಿದೆ.
ಜಿಶೋ ಲೋನ್ ಆಂಟನಿ ಈ ಸಿನಿಮಾವನ್ನು ಬರೆದು ನಿರ್ದೇಶನ ಮಾಡಿದ್ದಾರೆ. ಸಿನಿಮಾವನ್ನು ವಿಎಸ್ ಲಾಲನ್ ನಿರ್ಮಾಣ ಮಾಡಿದ್ದಾರೆ. ಫೋರ್ ಮ್ಯೂಸಿಕ್ ಸಂಸ್ಥೆ ಈ ಸಿನಿಮಾಕ್ಕೆ ಸಂಗೀತ ನೀಡಿದೆ. ಸಿನಿಮಾದ ಕ್ಯಾಮೆರಾ ಕೆಲಸ ಸಜದ್ ಕಾಕು ಮಾಡಿದ್ದಾರೆ. ಕೆಲ ಅತ್ಯುತ್ತಮ ತಂತ್ರಜ್ಞರು ಸೇರಿ ಈ ಸಿನಿಮಾಕ್ಕೆ ಕೆಲಸ ಮಾಡಿದ್ದು, ಸಿನಿಮಾ ಡಿಸೆಂಬರ್ 13ಕ್ಕೆ ಬಿಡುಗಡೆ ಆಗಲಿದೆ.