Monday, November 28, 2022

Latest Posts

ಮಲಯಾಳಂ ನತ್ತ ಹೆಜ್ಜೆ ಇಟ್ಟ ರಾಜ್ ಬಿ ಶೆಟ್ಟಿ: ಯಾವ ಸಿನಿಮಾ? ಯಾರು ಹೀರೋಯಿನ್?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸ್ಯಾಂಡಲ್ ವುಡ್ ನಟ ಮತ್ತು ನಿರ್ದೇಶಕ ರಾಜ್ ಬಿ ಶೆಟ್ಟಿ ವಿಭಿನ್ನ ನಟನೆ, ನಿರ್ದೇಶನದಿಂದ ಇಂದು ಇಡೀ ವಿಶ್ವದಲ್ಲೇ ಮನೆ ಮಾತಾಗಿದ್ದಾರೆ.

ರಾಜ್ ಬಿ ಶೆಟ್ಟಿ ವಿಭಿನ್ನ ಕಾನ್ಸೆಪ್ಟ್ ಮೂಲಕ ಕನ್ನಡ ಸಿನಿರಸಿಕರ ಹೃದಯ ಗೆದ್ದಿದ್ದರು.
ಇದೀಗ ರಾಜ್ ಬಿ ಶೆಟ್ಟಿ ಕಡೆಯಿಂದ ಇಂಟ್ರಸ್ಟಿಂಗ್ ವಿಚಾರ ಬಹಿರಂಗವಾಗಿದೆ. ರಾಜ್ ಬಿ ಶೆಟ್ಟಿ ಸೈಲೆಂಟ್ ಆಗಿ ಮಲಯಾಳಂ ಸಿನಿಮಾರಂಗಕ್ಕೆ ಹಾರಿದ್ದಾರೆ. ಸದ್ದಿಲ್ಲದೆ ಅಲ್ಲಿ ಸಿನಿಮಾ ಮಾಡಲು ಸಜ್ಜಾಗಿದ್ದಾರೆ.

ಈ ಸಿನಿಮಾಕ್ಕೆ ಜೋಡಿಯಾಗಿ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಅಪರ್ಣಾ ಬಾಲಮುರಳಿ ನಟಿಸುತ್ತಿದ್ದಾರೆ.

ಜಿಶೋ ಲೋನ್ ಆಂಟೋನಿ ನಿರ್ದೇಶನದ ‘ರುಧಿರಂ’ ಸಿನಿಮಾ ಮೂಲಕ ರಾಜ್ ಬಿ ಶೆಟ್ಟಿ ಮಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲಸಿನಿಮಾದ ಪೋಸ್ಟರ್ ರಿಲೀಸ್ ಆಗಿದ್ದು ರಾಜ್ ಬಿ ಶೆಟ್ಟಿ ಮತ್ತು ಅಪರ್ಣಾ ಇಬ್ಬರೂ ಪೋಸ್ಟರ್ ಶೇರ್ ಮಾಡಿದ್ದಾರೆ.

2023ರಿಂದ ರುಧಿರಂ ಚಿತ್ರೀಕರಣ ಪ್ರಾರಂಭವಾಗಲಿದ್ದು, ರಾಜ್ ಬಿ ಶೆಟ್ಟಿ ತೆರೆಹಂಚಿಕೊಳ್ಳಲು ಉತ್ಸುಕಳಾಗಿದ್ದೀನಿ ಎಂದು ಅಪರ್ಣಾ ಹೇಳಿದ್ದಾರೆ.

ಅಪರ್ಣಾ ಪೋಸ್ಟ್‌ಗೆ ರಾಜ್ ಬಿ ಶೆಟ್ಟಿ ಕಾಮೆಂಟ್ ಮಾಡಿ ತಾನು ಕೂಡ ಉತ್ಸುಕರಾಗಿರುವುದಾಗಿ ಹೇಳಿದ್ದಾರೆ. ಸದ್ಯ ರಿಲೀಸ್ ಆಗಿರುವ ಪೋಸ್ಟರ್ ಪೇಂಟಿಂಗ್ ರೂಪದಲ್ಲಿದೆ.

ಈ ಸಿನಿಮಾಗೆ ಕನ್ನಡದ ಸಂಗೀತ ನಿರ್ದೇಶಕ ಮಿಧುನ್ ಮುಕುಂದನ್ ಸಂಗೀತ ನೀಡುತ್ತಿದ್ದಾರೆ. ಸದ್ಯ ಪ್ರಿ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿರುವ ಸಿನಿಮಾತಂಡ ಮುಂದಿನ ವರ್ಷದಿಂದ ಚಿತ್ರೀಕರಣ ಪ್ರಾರಂಭ ಮಾಡುತ್ತಿದೆ. ಈ ಸಿನಿಮಾ ಮಲಯಾಳಂ ಜೊತೆಗೆ ಕನ್ನಡ, ತೆಲುಗು ಮತ್ತು ತಮಿಳಿನಲ್ಲೂ ರಿಲೀಸ್ ಆಗುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!