ಕಾಂತಾರ ಚಿತ್ರ ನಮ್ಮನ್ನು ಯೋಚಿಸುವಂತೆ ಮಾಡಿದೆ: ರಾಜಮೌಳಿ ಸ್ಪೆಷಲ್‌ ಟಾಕ್

ಹೊಸದಿಗಂತ ಡಿಜಿಟಲದ ಡೆಸ್ಕ್:‌ 

ಕನ್ನಡದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಿತ್ರ ಚಿಕ್ಕ ಸಿನಿಮಾವಾಗಿ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿತ್ತು. 20 ಕೋಟಿ ಬಜೆಟ್ ನಲ್ಲಿ ತಯಾರಾದ ಕಾಂತಾರ ಸಿನಿಮಾ ವಿಶ್ವಾದ್ಯಂತ ಸುಮಾರು 400 ಕೋಟಿ ಕಲೆಕ್ಷನ್ ಮಾಡಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ತಾರೆಯರು ಕೂಡ ಈ ಸಿನಿಮಾವನ್ನು ಹೊಗಳಿದ್ದಾರೆ. ಇತ್ತೀಚೆಗಷ್ಟೇ ಈ ಸಿನಿಮಾದ ಬಗ್ಗೆ ರಾಜಮೌಳಿ ಸ್ಪೆಷಲ್ ಕಾಮೆಂಟ್‌ ಮಾಡಿದ್ದಾರೆ.

ರಾಜಮೌಳಿ ಮಾತನಾಡಿ, ಕಾಂತಾರ ಸಿನಿಮಾ ಸಣ್ಣ ಸಿನಿಮಾಗಳೂ ಭರ್ಜರಿ ಕಲೆಕ್ಷನ್ ಮಾಡುತ್ತವೆ ಎಂಬುದನ್ನು ಸಾಬೀತು ಮಾಡಿದೆ. ಬಿಗ್ ಬಜೆಟ್ ಸಿನಿಮಾಗಳೆಂದರೆ ವಿಶೇಷ, ಆದರೆ ಇಷ್ಟು ಚಿಕ್ಕ ಬಜೆಟ್ ಸಿನಿಮಾ ಕಾಂತಾರ ಕಲೆಕ್ಷನ್ ನಲ್ಲಿ ಜಾದೂ ಮಾಡಿದೆ. ಇದರಿಂದಾಗಿ ಸಿನಿಮಾದ ಮೇಕಿಂಗ್ ಭಾರೀ ಇರಬೇಕು ಎಂದುಕೊಂಡಿರುವ ನನ್ನಂಥವರಿಗೆ ಈ ಚಿತ್ರ ಕಡಿವಾಣ ಹಾಕಿದೆ. ನನ್ನಂತೆಯೇ ಬಿಗ್ ಬಜೆಟ್ ಸಿನಿಮಾಗಳ ನಿರ್ದೇಶಕರನ್ನು ಕಾಂತಾರ ಚಿಂತನೆಗೆ ತಳ್ಳಿದೆ. ನಾವು ಬಿಗ್‌ ಬಜೆಟ್ ಚಿತ್ರದ ನಿರ್ಮಾಣ ವೆಚ್ಚವನ್ನು ಮತ್ತೊಮ್ಮೆ ಪರಿಶೀಲಿಸಬೇಕಾಗಿದೆ. ಇನ್ಮುಂದೆ ಸಿನಿಮಾ ಆರಂಭಿಸುವಾಗ ಎರಡು ಬಾರಿ ಬಜೆಟ್ ಚೆಕ್ ಮಾಡಬೇಕು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!