Monday, October 2, 2023

Latest Posts

CINE| ಎಲ್ಲರ ನಿರೀಕ್ಷೆ ಅಂತ್ಯ, ರಾಜಮೌಳಿ ಮುಂದಿನ ಸಿನಿಮಾ ‘ಮೇಡ್ ಇನ್ ಇಂಡಿಯಾ’ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಜಮೌಳಿ ಸಿನಿಮಾ ಎಂದರೆ ಎಲ್ಲರೂ ಕಾತರರಾಗಿ ಕಾಯುತ್ತಾರೆ. ಬಾಹುಬಲಿ ಮೂಲಕ ರಾಷ್ಟ್ರಮಟ್ಟದ ಖ್ಯಾತಿ ಗಳಿಸಿದ ರಾಜಮೌಳಿ,  RRR ಮೂಲಕ ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದರು. ಈ ಸಿನಿಮಾ ಬಳಿಕ ರಾಜಮೌಳಿ ಮುಂದಿನ ಸಿನಿಮಾ ಯಾವುದಿರಬಹುದೆಂದು ಎಲ್ಲರ ಕಾಯುವಿಕೆಗೆ ಬ್ರೇಕ್‌ ಬಿದ್ದಿದೆ. ಅಂತೂ ಇಂದು ರಾಜಮೌಳಿ ತಮ್ಮ ಮುಂದಿನ ಸಿನಿಮಾವನ್ನು ಘೋಷಣೆ ಮಾಡಿದ್ದಾರೆ.

ಇದುವರೆಗೆ ಚಿತ್ರರಂಗದಲ್ಲಿ ಸಾಕಷ್ಟು ಬಯೋಪಿಕ್‌ಗಳು ಬಂದಿವೆ. ಆದರೆ ಈಗ ಚಿತ್ರರಂಗದ ಬಗ್ಗೆ ಬಯೋಪಿಕ್ ಬರುತ್ತಿದೆ. ನಿತಿನ್ ಕಕ್ಕರ್ ನಿರ್ದೇಶನದ ‘ಮೇಡ್ ಇನ್ ಇಂಡಿಯಾ’ ಸಿನಿಮಾವನ್ನು ವರುಣ್ ಗುಪ್ತಾ ಮತ್ತು ರಾಜಮೌಳಿ ಅವರ ಪುತ್ರ ಎಸ್‌ಎಸ್ ಕಾರ್ತಿಕೇಯ ನಿರ್ಮಿಸಲಿದ್ದಾರೆ. ಭಾರತೀಯ ಸಿನಿಮಾದ ಹುಟ್ಟು, ಬೆಳವಣಿಗೆ, ಭಾರತೀಯ ಚಿತ್ರರಂಗವನ್ನು ಯಾರು ಪ್ರಾರಂಭಿಸಿದರು ಎಂಬ ಕಥಾವಸ್ತುವನ್ನು ಹೊಂದಿದೆ. ರಾಜಮೌಳಿ ಅವರ ಮೇಲ್ವಿಚಾರಣೆಯಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ.

ಇತ್ತೀಚೆಗಷ್ಟೇ ರಾಜಮೌಳಿ ಈ ಸಿನಿಮಾದ ಬಗ್ಗೆ ಅಧಿಕೃತವಾಗಿ ಘೋಷಿಸಿದ್ದರು. ರಾಜಮೌಳಿ ನಿರ್ಮಾಪಕರಾಗಿ ಸಿನಿಮಾ ಮಾಡುತ್ತಿದ್ದರೆ ಅದೊಂದು ಒಳ್ಳೆ ಇಂಟರೆಸ್ಟಿಂಗ್ ಸ್ಟೋರಿ ಎಂದು ಭಾವಿಸಿ ಪ್ರೇಕ್ಷಕರು ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿಸುತ್ತಿದ್ದಾರೆ. ಈ ಸಿನಿಮಾದ ಅನೌನ್ಸ್ ಮೆಂಟ್ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡುತ್ತಾ.. ಬಯೋಪಿಕ್ ಮಾಡುವುದು ತುಂಬಾ ಕಷ್ಟ.  ಅದರಲ್ಲೂ ಈಗ ಫಾದರ್ ಆಫ್ ಇಂಡಿಯನ್ ಫಿಲ್ಮ್‌ನ ಬಯೋಪಿಕ್ ಮಾಡುವುದು ಹೆಚ್ಚು ಕಷ್ಟ. ಈ ಸಿನಿಮಾವನ್ನು ನನಗೆ ನಿರೂಪಣೆ ಮಾಡಿದಾಗ ನಾನು ತುಂಬಾ ಭಾವನಾತ್ಮಕವಾಗಿ ಕನೆಕ್ಟ್ ಆಗಿದ್ದೆ. ಅದಕ್ಕಾಗಿಯೇ ನಾನು ಈ ಮೇಡ್ ಇನ್ ಇಂಡಿಯಾ ಚಿತ್ರವನ್ನು ಬಹಳ ಹೆಮ್ಮೆಯಿಂದ ಪ್ರಸ್ತುತಪಡಿಸುತ್ತಿದ್ದೇನೆ ಎಂದು ರಾಜಮೌಳಿ ಟ್ವೀಟ್ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!