ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಮೌಳಿ RRR ಚಿತ್ರದ ಮೂಲಕ ದೇಶದಲ್ಲಷ್ಟೇ ಅಲ್ಲ ವಿಶ್ವದಾದ್ಯಂತ ಹೆಸರು ಮಾಡಿದ್ದಾರೆ. ಟಾಲಿವುಡ್ನಿಂದ ಹಾಲಿವುಡ್ವರೆಗೆ ಎಲ್ಲರೂ ಈ ಚಿತ್ರಕ್ಕಾಗಿ ರಾಜಮೌಳಿ ಮತ್ತು ಅವರ ನಿರ್ದೇಶನದ ಪ್ರತಿಭೆಯನ್ನು ಮೆಚ್ಚುತ್ತಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ರಾಜಮೌಳಿ ಅಮೆರಿಕದಲ್ಲಿದ್ದು ಅಲ್ಲಿನ ಚಿತ್ರೋತ್ಸವಗಳಲ್ಲಿ ಪಾಲ್ಗೊಂಡಿದ್ದಾರೆ.
ರಾಜಮೌಳಿ ತಮ್ಮ RRR ಚಿತ್ರವನ್ನು ಆಸ್ಕರ್ ಅನ್ನು ಗುರಿಯಾಗಿಟ್ಟುಕೊಂಡು ಪ್ರಚಾರ ಮಾಡುತ್ತಿದ್ದಾರೆ. ಹಾಲಿವುಡ್ ನಲ್ಲಿ ಈಗಾಗಲೇ ಹಲವು ಮನ್ನಣೆಗಳು ಬಂದಿವೆ. ಅನೇಕ ಪ್ರಶಸ್ತಿಗಳು ಮತ್ತು ಪುರಸ್ಕಾರಗಳು ಸಹ ಸಿಕ್ಕಿವೆ. ಇತ್ತೀಚೆಗಷ್ಟೇ ಲಾಸ್ ಏಂಜಲೀಸ್ ಟೈಮ್ಸ್ ಪತ್ರಿಕೆಯಲ್ಲಿ ರಾಜಮೌಳಿ ಕುರಿತು ವಿಶೇಷ ಲೇಖನವೊಂದು ಪ್ರಕಟವಾಗಿತ್ತು. ರಾಜಮೌಳಿ RRR ಗಾಗಿ ಹಾಲಿವುಡ್ನಲ್ಲಿ ಮತ್ತೊಂದು ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.
ನ್ಯೂಯಾರ್ಕ್ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್ (NYFCC) RRR ಚಲನಚಿತ್ರಕ್ಕಾಗಿ ರಾಜಮೌಳಿ ಅವರನ್ನು ಅತ್ಯುತ್ತಮ ನಿರ್ದೇಶಕ ಎಂದು ಆಯ್ಕೆ ಮಾಡಿದೆ. ಈ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ನಿರ್ದೇಶಕ ಎಂಬ ಹೊಸ ದಾಖಲೆಯನ್ನು ರಾಜಮೌಳಿ ನಿರ್ಮಿಸಿದ್ದಾರೆ. ಇದರೊಂದಿಗೆ ಅನೇಕ ಸೆಲೆಬ್ರಿಟಿಗಳು ಮತ್ತು ನೆಟ್ಟಿಗರು ರಾಜಮೌಳಿ ಅವರನ್ನು ಅಭಿನಂದಿಸುತ್ತಿದ್ದಾರೆ.
. @SSRajamouli wins the prestigious New York Film Critics Circle Award for the Best Director! 🤩⚡️ @NYFCC
Words can't do justice to describe how happy and proud we are…
Our heartfelt thanks to the jury for recognising #RRRMovie. pic.twitter.com/zQmen3sz51
— RRR Movie (@RRRMovie) December 3, 2022
BEST DIRECTOR: S. S. Rajamouli, RRR
— New York Film Critics Circle (@nyfcc) December 2, 2022