ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಶ್ರೀಲಂಕಾದಲ್ಲಿ ನೂತನ ಸಂಪುಟ ರಚಿಸಿದ ರಾಜಪಕ್ಸೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಅರಾಜಕತೆ , ಆರ್ಥಿಕ ಬಿಕ್ಕಟ್ಟು ಗಳ ವಿರುಧ್ದವಾಗಿ ದೇಶದಾದ್ಯಂತ ದಂಗೆಗಳು, ಪ್ರತಿಭಟನೆಗಳಾಗುತ್ತಿದ್ದರೂ ಅಧ್ಯಕ್ಷ ಗೊತಬಯ ರಾಜಪಕ್ಸೆ ತಮ್ಮ ಸಚಿವ ಸಂಪುಟ ವಿಸ್ತರಣೆ ಮಾಡಿದ್ದಾರೆ ಎಂದು ಶ್ರೀಲಂಕಾ ಮಾಧ್ಯಮಗಳು ವರದಿ ಮಾಡಿವೆ.

17 ಹೊಸ ಮುಖಗಳನ್ನು ಸಚಿವ ಸಂಪುಟಕ್ಕೆ ತೆಗೆದುಕೊಳ್ಳುವ ಮೂಲಕ ನೂತನ ಸಚಿವ ಸಂಪುಟ ರಚಿಸಿರುವ ರಾಜಪಕ್ಸೆ ಅಧಿಕಾರದಲ್ಲಿ ಮುಂದುವರಿಯಲು ಯತ್ನಿಸುತ್ತಿದ್ದಾರೆ. ಇತ್ತೀಚೆಗೆ, ಬೃಹತ್ ಪ್ರತಿಭಟನೆಯಿಂದಾಗಿ ಇಡೀ ಶ್ರೀಲಂಕಾ ಕ್ಯಾಬಿನೆಟ್ ರಾಜೀನಾಮೆ ನೀಡಿತ್ತು. ಆದರೆ ಈಗ ಅನನುಭವಿ ಹಾಗೂ ಹೊಸ ಮುಖಗಳನ್ನು ಸಂಪುಟಕ್ಕೆ ಸೇರಿಸಿಕೊಂಡು ಆಡಳಿತ ನಡೆಸಲು ಪ್ರಧಾನಿ ರಾಜಪಕ್ಸೆ ಮುಂದಾಗಿದ್ದು ನೂತನ ಸಂಪುಟ ಇಂದು ಪ್ರಮಾಣವಚನ ಮಾಡುವ ಸಂಭವವಿದೆ ಎಂದು ವರದಿಗಳು ಹೇಳಿವೆ.

ಅನನುಭವಿ ಮಂತ್ರಿಗಳೊಂದಿಗೆ ಹೊಸ ಕ್ಯಾಬಿನೆಟ್ ಅನ್ನು ನೇಮಿಸುವ ಅಧ್ಯಕ್ಷರ ನಿರ್ಧಾರವನ್ನುವಿರೋಧ ಪಕ್ಷಗಳು ವಿರೋಧಿಸಿವೆ. ದೇಶದ ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದು ಸಂಸತ್ತಿನ ಅಧಿವೇಶನಕ್ಕೂ ಮುನ್ನ ಹೊಸ ಸಚಿವ ಸಂಪುಟವನ್ನು ಗೊತಬಯ ರಚಿಸುತ್ತಿದ್ದಾರೆ ಎನ್ನಲಾಗಿದೆ. ಕೋವಿಡ್-19‌ ಸಂದರ್ಭದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಿಸಿದ ಶ್ರೀಲಂಕಾ ಕಳೆದ ವಾರ ತನ್ನ ವಿದೇಶಿ ಸಾಲವನ್ನು ಮರುಪಾವತಿಸಲಾಗದೇ ದಿವಾಳಿಯಾಗಿತ್ತು.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!