Monday, December 11, 2023

Latest Posts

ರಾಜಸ್ಥಾನ ವಿಧಾನಸಭಾ ಚುನಾವಣೆ: ಬಿಜೆಪಿಯಿಂದ ಮೊದಲ ಪಟ್ಟಿ ಘೋಷಣೆ

ಹೊಸದಿಂತ ಡಿಜಿಟಲ್‌ ಡೆಸ್ಕ್:‌

ಪಂಚ ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ನವೆಂಬರ್ 7 , 17 ಹಾಗೂ 23 ರಂದು ಐದು ರಾಜ್ಯಗಳ ಚುನಾವಣೆ ನಡೆಯಲಿದೆ.

ಅದ್ರಲ್ಲೂ ರಾಜಸ್ಥಾನದಲ್ಲಿ ನವೆಂಬರ್ 23 ರಂದು ಒಂದು ಹಂತದಲ್ಲಿ ಚುನಾವಣೆ ನಡೆಯಲಿದೆ. ಡಿಸೆಂಬರ್ 3 ರಂದು ಪಂಚ ರಾಜ್ಯ ಚುನಾವಣೆಗಳ ಫಲಿತಾಂಶ ಘೋಷಣೆಯಾಗಲಿದೆ.

ಹೀಗಾಗಿ ರಾಜಸ್ಥಾನದಲ್ಲಿ ಬಿಜೆಪಿ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಘೋಷಿಸಿದೆ. ಈ ಪಟ್ಟಿಯಲ್ಲಿ ಮಾಜಿ ಸಿಎಂ, ಬಿಜೆಪಿ ಹಿರಿಯ ನಾಯಕಿ ವಸುಂದರ ರಾಜೆಗೆ ಸ್ಥಾನ ನೀಡಿಲ್ಲ.

ವಸುಂದರ ರಾಜೆ ಮಾತ್ರವಲ್ಲ, ರಾಜೆ ಆಪ್ತರಾಗಿರುವ ಶಾಸಕ ನರ್ಪತ್ ಸಿಂಗ್ ರಾಜ್ವಿ, ರಾಜಪಾಲ್ ಸಿಂಖ್ ಶೇಖಾವತ್ ಸೇರಿದಂತೆ ಕೆಲ ಪ್ರಮುಖ ನಾಯಕರಿಗೂ ಕೊಕ್ ನೀಡಲಾಗಿದೆ.

ರಾಜಸ್ಥಾನ ವಿಧಾನಸಭಾ ಚುನಾವಣೆಗೆ 41 ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರು ಘೋಷಿಸಲಾಗಿದೆ.ಈ ಬಾರಿಯ ರಾಜಸ್ಥಾನ ಚುನಾವಣೆಯಲ್ಲಿ ರಾಜಸ್ಥಾನದಿಂದ ಲೋಕಸಭೆಗೆ ಆಯ್ಕೆಯಾಗಿರುವ 7 ಸಂಸದರು ವಿಧಾನಸಭೆಗೆ ಸ್ಪರ್ಧಿಸುತ್ತಿದ್ದಾರೆ.

ರಾಜಸ್ಥಾನದ ಪ್ರಮುಖ 7 ಸಂಸದರು ವಿಧಾನಸಭೆ ಸ್ಪರ್ಧಿಸಿ ಬಿಜೆಪಿ ಅಧಿಕಾರಕ್ಕೆ ತರುವ ಹೊಣೆ ಹೊತ್ತುಕೊಂಡಿದ್ದಾರೆ. ಜೋತ್ವಾರ ಕ್ಷೇತ್ರದಿಂದ ಲೋಕಸಭಾ ಸಂಸದ ರಾಜ್ಯವರ್ಧನ್ ರಾಥೋಡ್, ವಿದ್ಯಾದರ ನಗರ ಕ್ಷೇತ್ರದಿಂದ ಸಂಸದೆ ದಿವ್ಯ ಕುಮಾರ್, ತಿಜಾರಾ ಕ್ಷೇತ್ರದಿಂದ ಬಾಲಕನಾಥ್, ಮಂದ್ವಾ ಕ್ಷೇತ್ರದಿಂದ ಸಂಸದ ನರೇಂದ್ರ ಕುಮಾರ್, ಕಿಶನಘರ ಕ್ಷೇತ್ರದಿಂದ ಭಾಗಿರತ್ ಚೌಧರಿ, ಸವಾರಿ ಮಾಧೋಪುರ್ ಕ್ಷೇತ್ರದಿಂದ ಕಿರೋಡಿ ಲಾಲ್ ಮೀನಾ ಹಾಗೂ ಸಂಚೋರ್ ಕ್ಷೇತ್ರದಿಂದ ದೇವಜಿತ್ ಪಟೇಲ್ ಸ್ಪರ್ಧಿಸುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!