Tuesday, March 21, 2023

Latest Posts

ಹೊಸದಾಗಿ 19ಜಿಲ್ಲೆಗಳನ್ನು ಘೋಷಿಸಿದ ಗೆಹ್ಲೋಟ್:‌ ಚುನಾವಣಾ ಗಿಮಿಕ್‌ ಎಂದು ಬಿಜೆಪಿ ಟೀಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕಾಂಗ್ರೆಸ್ ಶಾಸಕರ ಬಹುಕಾಲದ ಬೇಡಿಕೆಯನ್ನು ಈಡೇರಿಸಿರುವ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಶುಕ್ರವಾರ ರಾಜಸ್ಥಾನದಲ್ಲಿ 19 ಹೊಸ ಜಿಲ್ಲೆಗಳನ್ನು ಘೋಷಿಸಿದ್ದಾರೆ. ರಾಜ್ಯದಲ್ಲಿ ಹೊಸ ಜಿಲ್ಲೆಗಳನ್ನು ರಚಿಸುತ್ತಿರುವುದು 15 ವರ್ಷಗಳಲ್ಲಿ ಇದೇ ಮೊದಲು. ಬದಲಾವಣೆಯ ಮೊದಲು ರಾಜಸ್ಥಾನವು 33 ಜಿಲ್ಲೆಗಳನ್ನು ಹೊಂದಿತ್ತು.

ರಾಜಸ್ಥಾನವು ಭೌಗೋಳಿಕವಾಗಿ ದೇಶದಲ್ಲೇ ದೊಡ್ಡ ರಾಜ್ಯವಾಗಿದ್ದು, ರಾಜ್ಯದಲ್ಲಿ ಎರಡು ಮೂಲೆಗಳ ನಡುವಿನ ಅಂತರವು 100 ಕಿಲೋಮೀಟರ್‌ಗಿಂತ ಹೆಚ್ಚು ಇರುವ ಅನೇಕ ಜಿಲ್ಲೆಗಳಿವೆ. ಜನರು ಸರ್ಕಾರಿ ಸೇವೆಗಳನ್ನು ಪಡೆಯುವುದು ಕಷ್ಟಕರವಾಗಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಗೆಹ್ಲೋಟ್ ಹೇಳಿದರು. “ಜಿಲ್ಲೆಗಳು ಹತ್ತಿರವಾಗಿದ್ದರೆ ಅದು ಪರಿಣಾಮಕಾರಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಸಹಾಯ ಮಾಡುತ್ತದೆ, ಉತ್ತಮ ಆಡಳಿತವನ್ನು ಒದಗಿಸಬಹುದು.” ಎಂದರು.

ಹೊಸ 19 ಜಿಲ್ಲೆಗಳು: ಅನೂಪ್‌ಗಢ್, ಇದು ಗಂಗಾನಗರದ ಭಾಗವಾಗಿತ್ತು; ಬಲೋತ್ರಾ, ಬೇವರ್, ಕೇಕ್ರಿ, ದೀಗ್, ದೀದ್ವಾನ-ಕುಚಮನ್, ದುಡು, ಗಂಗಾಪುರ ನಗರ, ಜೈಪುರ ಉತ್ತರ, ಜೈಪುರ ದಕ್ಷಿಣ, ಜೋಧಪುರ ಪೂರ್ವ, ಜೋಧಪುರ ಪಶ್ಚಿಮ, ಕೊಟ್ಪುಟ್ಲಿ-ಬೆಹ್ರೋರ್, ಖೇರ್ತಾಲ್, ನೀಮ್ ಕಥಾನ, ಫಲೋಡಿ, ಸಾಲಂಬರ್, ಸಂಚೋರ್ ಮತ್ತು ಶಹಪುರ.

ಇನ್ನೂ ಈ ಹೊಸ ಜಿಲ್ಲೆಗಳು ಚುನಾವಣಾ ಗಿಮಿಕ್‌ ಎಂದು ಬಿಜೆಪಿ ಟೀಕಿಸಿದೆ. ಕಾಂಗ್ರೆಸ್‌ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೊಸ ಜಿಲ್ಲೆಗಳ ಘೋಷಣೆಯಂತಹ ಕ್ರಮ ಕೈಗೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!