ಸಾಲ ತೀರಿಸದಿದ್ದಕ್ಕೆ ಹೆಣ್ಣುಮಕ್ಕಳ ಹರಾಜು: ಮಾನವ ಹಕ್ಕುಗಳ ಆಯೋಗ ಕೆಂಡಾಮಂಡಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕುಟುಂಬದ ಯಜಮಾನ ಸಾಲ ತೀರಿಸಿಲ್ಲ ಎಂಬ ಕಾರಣಕ್ಕೆ ಆ ಕುಟುಂಬಗಳ ಹೆಣ್ಣು ಮಕ್ಕಳನ್ನು ಹರಾಜು ಹಾಕಿರುವ ಅಮಾನುಷ ಘಟನೆ  ರಾಜಸ್ಥಾನದಲ್ಲಿ ಬೆಳಕಿಗೆ ಬಂದಿದೆ. ಈ ಕುರಿತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಪ್ರತಿಕ್ರಿಯಿಸದ್ದು, ಸರ್ಕಾರದ ವಿರುದ್ಧ ಚಾಟಿ ಬೀಸಿದೆ.

ಹಣಕಾಸಿನ ವ್ಯವಹಾರ ಅಥವಾ ಸಾಲಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಇಲ್ಲಿನ ಜನ ಗ್ರಾಮದಲ್ಲಿರುವ ಹಿರಿಯರ ಬಳಿ ಹೋಗುತ್ತಿದ್ದು, ಇದನ್ನೇ ಬಂಡವಾಳವಾಗಿ ಮಾಡಿಕೊಂಡ ಅವರು ಅತ್ಯಂತ ಅಮಾನವೀಯ ವರ್ತಿಸುತ್ತಿದ್ದಾರೆ. ಕುಟುಂಬದ ಮುಖ್ಯಸ್ಥರು ಸಾಲವನ್ನು ತೀರಿಸಲು ಸಾಧ್ಯವಾಗದಿದ್ದರೆ, ಕುಟುಂಬಕ್ಕೆ ಸೇರಿದ ಆಸ್ತಿಗಳನ್ನು ಹರಾಜು ಮಾಡಲಾಗುತ್ತದೆ. ಜೊತೆಗೆ 8-18 ವರ್ಷದ ಹೆಣ್ಣು ಮಕ್ಕಳನ್ನು ಹರಾಜು ಹಾಕಲಾಗುತ್ತಿದೆ. ಒಂದು ವೇಳೆ ಇದಕ್ಕೆ ಒಪ್ಪದಿದ್ದಲ್ಲಿ ಸಾಲಗಾರನ ಪತ್ನಿಯ ಮೇಲೆ ಅತ್ಯಾಚಾರವೆಸಗುತ್ತಾರೆ. ಆ ಮನೆಯ ಹೆಣ್ಣುಮಕ್ಕಳನ್ನು ಮಾರಾಟ ಮಾಡಿ ಹಣ ಪಡೆಯುತ್ತಾರೆ.

ಇಂತಹ ಕಿರಾತಕ ಕೆಲಸಕ್ಕೆ ಮುಂಜಾಗ್ರತಾ ಕ್ರಮವಾಗಿ ಸ್ಟಾಂಪ್ ಪೇಪರ್‌ಗಳ ಮೇಲೆ ಒಪ್ಪಂದ ಮಾಡಿಸಿಕೊಳ್ಳುವುದು ಗಮನಾರ್ಹದ ಸಂಗತಿ. ಈ ಹರಾಜಿನಲ್ಲಿ ಮಾರಾಟವಾದ ಹೆಣ್ಣುಮಕ್ಕಳನ್ನು ಉತ್ತರ ಪ್ರದೇಶ, ಮಧ್ಯಪ್ರದೇಶ, ಮುಂಬೈ, ದೆಹಲಿ ಮತ್ತು ಕೆಲವೊಮ್ಮೆ ವಿದೇಶಗಳಿಗೆ ಕರೆದೊಯ್ಯಲಾಗುತ್ತದೆ. ಇತ್ತೀಚೆಗೆ ವ್ಯಕ್ತಿಯೊಬ್ಬರು 15 ಲಕ್ಷ ರೂ.ಸಾಲ ತೀರಿಸಲು ಸಾಧ್ಯವಾಗದ ಕಾರಣ ಅವರ ಸಹೋದರಿಯನ್ನು ಮೊದಲು ಹರಾಜು ಮಾಡಿದ್ದಾರೆ ಆದರೂ ಸಾಲ ತೀರಿಲ್ಲ ಎಂದು 12 ವರ್ಷದ ಮಗಳನ್ನು ಎರಡನೇ ಬಾರಿಗೆ ಹರಾಜು ಮಾಡಿದ್ದಾರೆ. ಬಾಲಕಿಯನ್ನು ರೂ.8 ಲಕ್ಷಕ್ಕೆ ಖರೀದಿಸಿರೂ ಸಾಲ ತೀರಿಲ್ಲ ಎಂದು ತನ್ನ ಐದು ಕಿರಿಯ ಸಹೋದರಿಯರನ್ನು ಸಹ ಹರಾಜಿಗಿಟ್ಟರು.

ಇನ್ನೊಂದು ಘಟನೆಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ತಾಯಿಯ ಚಿಕಿತ್ಸೆಗಾಗಿ  12 ​​ಲಕ್ಷ ರೂ. ಸಾಲ ಮಾಡಿದ್ದು, ಚಿಕಿತ್ಸೆ ಫಲಾಕರಿಯಾಗದೆ ಪತ್ನಿ ಸಾವನ್ನಪ್ಪಿದರು. ಈ ಸಾಲ ತೀರಿಸಲು ಮಗಳನ್ನು 6 ಲಕ್ಷ ರೂ.ಗೆ ಹರಾಜು ಹಾಕಿದ್ದಾರೆ, ಆ ಹುಡುಗಿಯನ್ನು ಖರೀದಿಸಿದವರು ಆಗ್ರಾಕ್ಕೆ ಕರೆದೊಯ್ದಿದ್ದಾರೆ. ಹೀಗೆ ಮೂರು ಬಾರಿ ಹರಾಜು ಮಾಡಿದ್ದು, ಈ ಕ್ರಮದಲ್ಲಿ ಆಕೆ ನಾಲ್ಕು ಬಾರಿ ಗರ್ಭ ಧರಿಸಿದ್ದರು ಎಂಬ ಭಯಾನಕ ಸತ್ಯ ಹೊರಬಿದ್ದಿದೆ.

ಈ ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಮಾನವ ಹಕ್ಕುಗಳ ಆಯೋಗ ಪ್ರತಿಕ್ರಿಯಿಸಿದ್ದು, ಗುಜರಾತ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿಗೆ ನೋಟಿಸ್ ಕಳುಹಿಸಿ ಇಂತಹ ಅಮಾನುಷ ಘಟನೆಗಳು ನಡೆಯುತ್ತಿದ್ದರೂ ಸರ್ಕಾರ ಏನು ಮಾಡುತ್ತಿದೆ?‌ ಇಂಥವರ ವಿರುದ್ಧ ಏನು ಕ್ರಮ ಕೈಗೊಳ್ಳಲಾಗಿದೆ? ಮತ್ತು ಯಾವ ರೀತಿಯ ಪ್ರಕರಣಗಳನ್ನು ದಾಖಲಿಸಲಾಗಿದೆ? ಎಂದು ಖಾರವಾಗಿ ಪ್ರಶ್ನಿಸಿದೆ. ಹೆಣ್ಣು ಮಕ್ಕಳ ಸುರಕ್ಷತೆ ಅಂದರೆ ಅಷ್ಟೊಂದು ಅಸಡ್ಡೆನಾ? ನಾಲ್ಕು ವಾರಗಳಲ್ಲಿ ಈ ಬಗ್ಗೆ ಸಂಪೂರ್ಣ ವಿವರ ನೀಡುವಂತೆ ಆದೇಶಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!