Friday, September 29, 2023

Latest Posts

ಮಹಿಳೆಯರ ಸುರಕ್ಷತೆ ಬಗ್ಗೆ ಸ್ವಂತ ಸರ್ಕಾರದ ವಿರುದ್ಧ ಟೀಕೆ: ಸಚಿವರ ವಿರುದ್ಧ ರಾಜಸ್ಥಾನ ಸಿಎಂ ಕ್ರಮ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಹಿಳೆಯರ ಸುರಕ್ಷತೆಯ ವಿಷಯದಲ್ಲಿ ತಮ್ಮದೇ ಸರ್ಕಾರವನ್ನು ಟೀಕಿಸಿದ್ದಕ್ಕಾಗಿ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ರಾಜಸ್ಥಾನದ ರಾಜ್ಯ ಸಚಿವರನ್ನು ವಜಾಗೊಳಿಸಿದ್ದಾರೆ. ರಾಜ್ಯ ವಿಧಾನಸಭೆಯಲ್ಲಿ ಮಣಿಪುರ ಹಿಂಸಾಚಾರವನ್ನು ಮಾತನಾಡುವ ಬದಲು ಸರ್ಕಾರವು ತಮ್ಮ ರಾಜ್ಯದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ರಾಜೇಂದ್ರ ಗೂಡಾ ಶುಕ್ರವಾರ ಹೇಳಿದರು. ಸಚಿವರ ಹೇಳಿಕೆಯ ಕೆಲವು ಗಂಟೆಗಳ ನಂತರ, ರಾಜೇಂದ್ರ ಗೂಡಾ ಅವರನ್ನು ರಾಜ್ಯ ಸಚಿವ ಸ್ಥಾನದಿಂದ ವಜಾಗೊಳಿಸಲಾಯಿತು.

ಮಹಿಳೆಯರಿಗೆ ಭದ್ರತೆ ನೀಡುವ ವಿಚಾರದಲ್ಲಿ ತಮ್ಮದೇ ಸರ್ಕಾರದ ವಿರುದ್ಧ ರಾಜೇಂದ್ರ ಗೂಡಾ ಪ್ರಶ್ನೆಗಳನ್ನು ಎತ್ತಿದರು. ಮಹಿಳೆಯರಿಗೆ ಭದ್ರತೆ ನೀಡುವಲ್ಲಿ ರಾಜಸ್ಥಾನ ವಿಫಲವಾಗಿರುವ ರೀತಿ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಿದ್ದು, ಮಣಿಪುರದ ವಿಷಯವನ್ನು ಎತ್ತುವ ಬದಲು ರಾಜಸ್ಥಾನದ ರಾಜ್ಯ ಸರ್ಕಾರವೇ ಆತ್ಮಾವಲೋಕನ ಮಾಡಿಕೊಳ್ಳಬೇಕು. ಮಹಿಳೆಯರ ಮೇಲೆ ಲೈಂಗಿಕ ಕಿರುಕುಳದ ಘಟನೆಗಳು ಈ ರೀತಿ ನಡೆಯುತ್ತಿದ್ದರೆ, ಮುಂದಿನ ಚುನಾವಣೆಯಲ್ಲಿ ಜನರ ಬಳಿಗೆ ಹೋಗುವುದು ಹೇಗೆ ಎಂದು ಪ್ರಶ್ನಿಸಿದರು. ಎಂದರು.

ಸತ್ಯ ಹೇಳಿದರೆ ಶಿಕ್ಷೆಯಾಗುವುದೇ? 

ಮಹಿಳಾ ಸುರಕ್ಷತೆ ಬಗ್ಗೆ ಸತ್ಯ ಹೇಳಿದರೆ ಸಚಿವ ಸ್ಥಾನದಿಂದ ಕೆಳಗಿಳಿಸಿ ಶಿಕ್ಷೆ ನೀಡುತ್ತೀರಾ ಎಂದು ರಾಜೇಂದ್ರ ಗೂಡಾ ಪ್ರಶ್ನಿಸಿದರು. “ನಾನು ಯಾವಾಗಲೂ ಸತ್ಯವನ್ನು ಹೇಳುತ್ತೇನೆ, ನಾನು ಸತ್ಯವನ್ನು ಹೇಳಿದ್ದಕ್ಕೆ ನನಗೆ ಶಿಕ್ಷೆಯಾಗಿದೆ” ಎಂದರು.

ಸಚಿವ ಸ್ಥಾನದಿಂದ ವಜಾಗೊಳಿಸುವ ಸಿಎಂ ಶಿಫಾರಸಿಗೆ ರಾಜ್ಯಪಾಲರು ಅನುಮೋದನೆ

ರಾಜ್ಯಪಾಲ ಕಲ್ ರಾಜ್ ಮಿಶ್ರಾ ಅವರು ರಾಜೇಂದ್ರ ಗೂಡಾ ಅವರನ್ನು ಸಚಿವ ಸ್ಥಾನದಿಂದ ತೆಗೆದು ಹಾಕುವ ಸಿಎಂ ಅಶೋಕ್ ಗೆಹ್ಲೋಟ್ ಕಳುಹಿಸಿದ್ದ ಶಿಫಾರಸನ್ನು ತಕ್ಷಣವೇ ಅಂಗೀಕರಿಸಿದ್ದಾರೆ. ಈ ಬಗ್ಗೆ ರಾಜಸ್ಥಾನ ರಾಜ್ಯಪಾಲರ ಕಚೇರಿ ಅಧಿಕೃತ ಹೇಳಿಕೆ ನೀಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!