Thursday, September 29, 2022

Latest Posts

ಬಿಡಿಎಯಿಂದ ರಾಜೇಶ ಗೌಡ ವರ್ಗಾವಣೆ: ನೂತನ ಆಯುಕ್ತರಾಗಿ ಕುಮಾರ್‌ ನಾಯ್ಕ್‌ ನೇಮಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಿಡಿಎ ಆಯುಕ್ತರಾಗಿದ್ದ ಎಂ.ಬಿ.ರಾಜೇಶ ಗೌಡ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದೇ ವೇಳೆ ಅವರ ವರ್ಗಾವಣೆಯಾದ ಜಾಗಕ್ಕೆ ಕುಮಾರ್‌ ನಾಯ್ಕ ಅವರನ್ನು ತಾತ್ಕಾಲಿಕವಾಗಿ ನೇಮಿಸಿ ಆದೇಶ ಮಾಡಲಾಗಿದೆ.
ಇಂಧನ ಇಲಾಖೆಯ ಎಸಿಎಸ್‌ ಆಗಿರುವ ಕುಮಾರ್‌ ನಾಯ್ಕ್‌ ಅವ್ರಿಗೆ ಸಧ್ಯ ಹೆಚ್ಚುವರಿ ಹೊಣೆ ವಹಿಸಲಾಗಿದ್ದು, ನೂತನ ಆಯುಕ್ತರಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.
ಡಾ.ಶಿವರಾಮ ಕಾರಂತ ಬಡಾವಣೆಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ನ್ಯಾಯಪೀಠವು ಬಿಡಿಎ ಅಧಿಕಾರಿಗಳ ಧೋರಣೆಗೆ ಚಾಟಿ ಬೀಸಿತ್ತು, ಕೋರ್ಟ್‌ ಆದೇಶದ ಬಗ್ಗೆ ಅವಿಧೇಯತೆ ತೋರಿದ್ದಕ್ಕೆ ರಾಜೇಶ ಗೌಡ ಅವರನ್ನು ಪ್ರಾಧಿಕಾರದಿಂದ ವರ್ಗಾವಣೆ ಮಾಡಬೇಕು ಎಂದೂ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನವನ್ನು ನೀಡಿತ್ತು. ಸುಪ್ರಿಂಕೋರ್ಟ್‌ ಆದೇಶದ ಬೆನ್ನಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!