Sunday, October 1, 2023

Latest Posts

CINE| ಬಾಕ್ಸಾಫೀಸ್‌ ಧೂಳೆಬ್ಬಿಸುತ್ತಿರುವ ಜೈಲರ್‌, ಎರಡು ದಿನಕ್ಕೆ ಇಷ್ಟೊಂದು ಕಲೆಕ್ಷನ್?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್’ ಸಿನಿಮಾ ಆಗಸ್ಟ್ 10 ರಂದು ಬಿಡುಗಡೆಯಾಗಿದ್ದು, ಭರ್ಜರಿ ಯಶಸ್ಸು ಕಂಡಿದೆ. ತಮನ್ನಾ, ಕನ್ನಡದ ಸ್ಟಾರ್ ಹೀರೋ ಶಿವರಾಜ್ ಕುಮಾರ್, ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್, ಜಾಕಿ ಶ್ರಾಫ್, ಸುನೀಲ್ ಮುಂತಾದ ಸ್ಟಾರ್ ನಟರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಜೈಲರ್ ಸಿನಿಮಾ ಮೊದಲ ದಿನವೇ ವಿಶ್ವದಾದ್ಯಂತ 95 ಕೋಟಿ ಗ್ರಾಸ್ ಕಲೆಕ್ಷನ್ ಆಗಿದೆ. ಎರಡನೇ ದಿನ ಒಟ್ಟು 56 ಕೋಟಿ ರೂ. ಜೈಲರ್ ಚಿತ್ರ ಎರಡೇ ದಿನಗಳಲ್ಲಿ ವಿಶ್ವಾದ್ಯಂತ 150 ಕೋಟಿ ಕಲೆಕ್ಷನ್ ಮಾಡಿದೆ.

ಇಂದು ಮತ್ತು ನಾಳೆ ವೀಕೆಂಡ್ ಕೂಡ ಆಗಿರುವುದರಿಂದ ಈ ಎರಡು ದಿನಗಳಲ್ಲಿ ಇನ್ನೂ 100 ಕೋಟಿ ಸುಲಭವಾಗಿ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ಪ್ರಸ್ತುತ ದಕ್ಷಿಣದಲ್ಲಿ ಅಂತಹ ಟಕ್ಕರ್‌ ಕೊಡುವ ದೊಡ್ಡ ಚಿತ್ರಗಳು ಇಲ್ಲ. ಜೈಲರ್ ಚಿತ್ರ ತೆಲುಗು ರಾಜ್ಯಗಳಲ್ಲೂ 15 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಅಮೇರಿಕದಲ್ಲಿ, ಜೈಲರ್ ಚಲನಚಿತ್ರವು ಎರಡು ದಿನಗಳಲ್ಲಿ ಮೂರು ಮಿಲಿಯನ್ ಡಾಲರ್ ಕ್ಲಬ್ ಅನ್ನು ಸೇರಿಕೊಂಡಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!