ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಮಲ್ಲೇಶ್ವರದ ಮಂತ್ರಿ ಸ್ಕ್ವೇರ್ ಮೆಟ್ರೋ ನಿಲ್ದಾಣದ ಬಳಿ ರಾಜೀವ್ ಗಾಂಧಿ ಕಂಚಿತ ಪ್ರತಿಮೆ ನಿರ್ಮಾಣವಾಗುತ್ತಿದೆ.
ಕಾಂಕ್ರಿಟ್ ಪ್ರತಿಮೆ ಬದಲಾಗಿ ಹೊಸ ಕಂಚಿನ ಪ್ರತಿಮೆ ನಿರ್ಮಾಣವಾಗುತ್ತಿದ್ದು, ಇದಕ್ಕೆ 1.11ಕೋಟಿ ರೂಪಾಯಿ ವೆಚ್ಚ ತಗುಲಲಿದೆ. 15 ನೇ ಹಣಕಾಸು ಆಯೋಗದ ಕಾರ್ಯಕ್ರಮದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗಾಗಿ ಕೈಗೆತ್ತಿಕೊಂಡ 25 ಜಂಕ್ಷನ್‌ಗಳಲ್ಲಿ ಸುಭಾಷ್ ನಗರವೂ ಒಂದಾಗಿದ್ದರೂ, ಪ್ರತಿಮೆಯ ವೆಚ್ಚವನ್ನು ಬಿಬಿಎಂಪಿ ತನ್ನ ಸ್ವಂತ ಹಣವನ್ನು ಬಳಸಿದೆ ಎನ್ನಲಾಗಿದೆ.