VIRAL VIDEO| ಒಂದು ಕೈಯಲ್ಲಿ ಬುಲೆಟ್‌ ಸವಾರಿ, ಇನ್ನೊಂದು ಕೈಯಲ್ಲಿ ಕತ್ತಿ ಹಿಡಿದು ಮಹಿಳೆಯರ ʻಗರ್ಬಾʼ ನೃತ್ಯ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದಕ್ಷಿಣದಂತೆ, ಉತ್ತರ ಭಾರತದಲ್ಲೂ ನವರಾತ್ರಿ ಆಚರಣೆಯನ್ನು ಬಹಳ ಅದ್ದೂರಿಯಾಗಿ ಆಚರಿಸುತ್ತಾರೆ. ಅದರಲ್ಲೂ ಈ ನವರಾತ್ರಿಯ ಸಂದರ್ಭಲ್ಲಿ ಗುಜರಾತ್‌ನಲ್ಲಿ ನಡೆಯುವ ಗರ್ಬಾ ನೃತ್ಯ ಎಲ್ಲರನ್ನೂ ಮಂತ್ರ ಮುಗ್ದಗೊಳಿಸುತ್ತದೆ. ಈ ವರ್ಷವೂ ನವರಾತ್ರಿ ಉತ್ಸವದಲ್ಲಿ ಗುಜರಾತಿ ಮಹಿಳೆಯರದ್ದೇ ಕಾರುಬಾರು. ಹೆಂಗಳೆಯರು ಮಾಡುವ ಸಾಹಸಗಳನ್ನು ನೋಡಿದರೆ, ಅವರು ನಿಜವಾಗಿಯೂ ಆದಿಶಕ್ತಿಗಳ ಸ್ವರೂಪದಂತೆ ಕಾಣುತ್ತಾರೆ. ಒಂದು ಕೈಯಲ್ಲಿ ಬುಲೆಟ್‌ ಓಡಿಸುತ್ತಾ, ಮತ್ತೊಂದು ಕೈಯಲ್ಲಿ ತಲ್ವಾರ್ ಹಿಡಿದು ಮಾಡಿರುವ ನೃತ್ಯ ಇದೀಗ ನೆಟ್‌ನಲ್ಲಿ ಸದ್ದು ಮಾಡುತ್ತಿದೆ.

ಮಂಗಳವಾರ (ಅಕ್ಟೋಬರ್ 17, 2023) ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನವರಾತ್ರಿ ಉತ್ಸವದ ಮೂರನೇ ದಿನದ ಅಂಗವಾಗಿ ಜೀಪ್ ಮತ್ತು ಮೋಟಾರ್‌ಸೈಕಲ್‌ಗಳಲ್ಲಿ ಮಹಿಳೆಯರು ತಲ್ವಾರ್‌ಗಳೊಂದಿಗೆ ‘ಗರ್ಬಾ’ ಪ್ರದರ್ಶಿಸಿದರು. ನವರಾತ್ರಿ ಉತ್ಸವದಲ್ಲಿ ‘ತಲ್ವಾರ್ ರಾಸ್’ ಅನ್ನು ಪ್ರದರ್ಶಿಸುವುದು ಗುಜರಾತ್ ಸಂಪ್ರದಾಯವಾಗಿದೆ. ಇದರ ಅಂಗವಾಗಿ ರಾಜ್‌ಕೋಟ್‌ನ ರಾಜ್ವಿ ಪ್ಯಾಲೇಸ್‌ನಲ್ಲಿ ದುರ್ಗಾ ಮಾತೆಯನ್ನು ಪೂಜಿಸಲು ಸಾಂಪ್ರದಾಯಿಕ ಉಡುಗೆಯಲ್ಲಿ ಮಹಿಳೆಯರು ತಲ್ವಾರ್ ರಾಸ್ ಅನ್ನು ಪ್ರದರ್ಶಿಸಿದರು.

ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ಬುಲೆಟ್ ವಾಹನವನ್ನು ಒಂದೇ ಕೈಯಿಂದ ಓಡಿಸುತ್ತಾ ತಲ್ವಾರ್ ಅನ್ನು ವೇಗವಾಗಿ ಸುತ್ತಿ ತಿರುಗಿಸುವುದು ಆಕರ್ಷಕವಾಗಿದೆ. ಮತ್ತೊಬ್ಬ ಮಹಿಳೆ ಒಂದೇ ಕೈಯಿಂದ ಜೀಪ್ ಓಡಿಸುತ್ತಾ ‘ತಲ್ವಾರ್ ರಾಸ್’ ಪ್ರದರ್ಶಿಸಿದರು. ಕೆಲವು ಮಹಿಳೆಯರು ಎರಡು-ವೀರ್‌ಗಳನ್ನು ಓಡಿಸುತ್ತಿದ್ದರೆ, ಇತರರು ಹಿಂದೆ ನಿಂತು ‘ತಲ್ವಾರ್ ರಾಸ್’ ಮಾಡಿದರು. ವೇಗದಲ್ಲಿ ಸುತ್ತುವ ವಾಹನಗಳ ಮೇಲೆ ಕತ್ತಿ ಹಿಡಿದುಕೊಂಡು ಮಹಿಳೆಯರು ಮಾಡುವ ಕಸರತ್ತುಗಳನ್ನು ನೀವೂ ನೋಡಿರಿ..

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!